ಬೆಳ್ಳಾರೆ: ಸಮೀಪದ ಕಳಂಜ ಎಂಬಲ್ಲಿ ಯುವಕನೊಬ್ಬನಿಗೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಯುವ ಕಾಂಗ್ರೆಸ್ ಪುತ್ತೂರು ನಗರ ಅಧ್ಯಕ್ಷ ಮೋನು ಬಪ್ಪಳಿಗೆ ಆಗ್ರಹಿಸಿದ್ದಾರೆ.
ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ಶಾಂತವಾಗಿದ್ದ ಬೆಳ್ಳಾರೆಯಲ್ಲಿ ಗಲಭೆ ಸೃಷಿಸುವ ಸಂಘಪರಿವಾರದ ಹುನ್ನಾರವನ್ನು ಪೋಲಿಸ್ ಇಲಾಖೆ ಮಟ್ಟ ಹಾಕಬೇಕಿದೆ ಹಾಗೂ ಆರೋಪಿಗಳಿಗೆ ಗರಿಷ್ಠ ಮಟ್ಟದ ಶಿಕ್ಷೆ ವಿಧಿಸಬೇಕೆಂದು ಪೋಲಿಸ್ ಇಲಾಖೆಯನ್ನು ಅವರು ಆಗ್ರಹಿಸಿದ್ದಾರೆ.
ಶಿವಮೊಗ್ಗದ ಹರ್ಷನಿಗೆ ನೀಡಿದ ರೀತಿಯಲ್ಲೇ ಸರಕಾರ ಮಸೂದ್ ಕುಟುಂಬಕ್ಕೂ ಸೂಕ್ತ ಪರಿಹಾರ ನೀಡಬೇಕೆಂದು ಮೋನು ಬಪ್ಪಳಿಗೆ ಆಗ್ರಹಿಸಿದ್ದಾರೆ.


























