ಉಡುಪಿ: ಬೈಂದೂರು ತಾಲೂಕಿನ ಉಪ್ಪುಂದದ ವಸತಿ ಗೃಹಕ್ಕೆ ಭಿನ್ನಮತೀಯ ಜೋಡಿಗಳು ಬಂದ ವಿಷಯ ತಿಳಿದು ಹಿಂದೂ ಸಂಘಟನೆಯ ಕಾರ್ಯಕರ್ತರು ನೀಡಿದ ಮಾಹಿತಿಯ ಮೇರೆಗೆ ಬೈಂದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.
ಉಳ್ಳಾಲದ ಉಳ್ಳಾಲಬೈಲು ನಿವಾಸಿ ಅಮೀರ್ ಅಲಿ(45), ಉಳ್ಳಾಲದ 28 ವರ್ಷದ ಯುವತಿಯೊಂದಿಗೆ ಆಗಮಿಸಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.
ಅಮೀರ್ ಅಲಿ ಗುಜರಿ ವ್ಯಾಪಾರಿಯಾಗಿದ್ದು, ದ.ಕ ಜಿಲ್ಲೆಯ ತೊಕ್ಕುಟ್ಟುವಿನಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದಾನೆ. ಯುವತಿ ಆತನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆಕೆಯ ಒಪ್ಪಿಗೆಯಿಂದಲೇ ಲಾಡ್ಜ್ ಗೆ ಕರೆತಂದಿರುವುದಾಗಿ ತಿಳಿದುಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.



























