ವಿಟ್ಲ: ಯುವತಿಯೋರ್ವಳು ಕಾಣೆಯಾದ ಬಗ್ಗೆ ಯುವತಿಯ ಸಹೋದರ ವಿಟ್ಲ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಯುವತಿಯು ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಬಸಬೆಟ್ಟು ಎಂಬಲ್ಲಿರುವ ಮನೆಯಿಂದ ಮನೆಯಲ್ಲಿ ಯಾರಿಗೂ ಹೇಳದೆ ಮನೆಯಿಂದ ಹೊರಟು ಹೋಗಿರುತ್ತಾಳೆ.
ಯುವತಿಯ ಅಣ್ಣನ ಜೊತೆ ಈ ಹಿಂದೆ ಮೂಲತಃ ಪುತ್ತೂರು ಮುಕ್ವೆ ನಿವಾಸಿ ಪ್ರಸ್ತುತ ವಿಟ್ಲದ ನೆಲ್ಲಿಗುಡ್ಡೆಯಲ್ಲಿರುವ ಸಿದ್ಧಿಕ್ ಮುಕ್ವೆ ಯುವತಿಯನ್ನು ಮದುವೆ ಮಾಡಿಕೊಡಬೇಕಾಗಿ ವಿಚಾರಿಸಿದ್ದು, ಆದುದರಿಂದ ಸಿದ್ದಿಕ್ ಮುಕ್ವೆ ರವರ ಜೊತೆಯಲ್ಲಿ ಹೋಗಿರುವುದಾಗಿ ಸಂಶಯ ವ್ಯಕ್ತವಾಗಿದೆ.
ಯುವತಿಯ ಬಗ್ಗೆ ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಕಾಣೆಯಾದ ಯುವತಿಯನ್ನು ಪತ್ತೆ ಮಾಡಿ ಕೊಡಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 123/2022 ರಂತೆ ಪ್ರಕರಣ ದಾಖಲಾಗಿದೆ.


























