ಕಡಬ: ಅನ್ಯಕೋಮಿನ ಯುವತಿಯ ಹಿಂದೂ ಯುವತಿ ತೆರಳಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಈ ಬಗ್ಗೆ ಕಡಬ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅನ್ಯಕೋಮಿನ ಯುವತಿ ನೀಡಿದ ದೂರಿನ ಮೇರೆಗೆ ಸುದರ್ಶನ್ ಗೆಲ್ಗೊಡಿ, ಪ್ರಶಾಂತ್ ಕೊಲ್ಯ, ತಮ್ಮ ಕಲ್ಕಡಿ, ಪ್ರಸಾದ್ ಕೊಲ್ಯ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ.
ಅನ್ಯಕೋಮಿನ ಯುವತಿಯ ಸ್ನೇಹಿತೆ ಹಿಂದೂ ಯುವತಿಯ ಅಕ್ಕ ಗರ್ಭಿಣಿಯಾದ ಕಾರಣ ಬಿರಿಯಾನಿ ತಿನ್ನುವ ಆಸೆ ಇದ್ದು, ಈ ಹಿನ್ನೆಲೆ ಬಿರಿಯಾನಿ ತೆಗೆದುಕೊಂಡು ಹೋಗಲು ಬರುತ್ತಿರುವಾಗ ನಾಲ್ವರು ಹಾಗೂ ಇತರರು ಕಾರು ಮತ್ತು ಬೈಕ್ ನಲ್ಲಿ ಹಿಂಬಾಲಿಸಿ ಬಂದು ನಂತರ ಯುವತಿಯ ಮನೆಯ ಮುಂದೆ ಅಕ್ರಮಕೂಟ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ, ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಕ್ರ ನಂಬ್ರ: 63/2022 ಕಲಂ 143,147,504,506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.



























