ಬೆಳ್ತಂಗಡಿ: ಆರು ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿದ್ದು, ಈವೇಳೆ ಜಗಳ ತಡೆಯಲು ಬಂದ ವ್ಯಕ್ತಿಗೆ ಹಲ್ಲೆ ನಡೆದಿದ್ದು, ಆದರೆ ಅವರು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟ ಘಟನೆ ಜು..22 ರಂದು ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದ ನಿವಾಸಿ ಜಾರಪ್ಪ ನಾಯ್ಕ್ (55) ಮೃತಪಟ್ಟವರು.

ಆರೋಪಿತ ನಾರಾಯಣ ನಾಯ್ಕ್ (47) ಎಂಬವರು ಸ್ಥಳೀಯ ಆರು ವರ್ಷದ ಬಾಲಕಿಗೆ ಕಳೆದ 10 ದಿನಗಳ ಹಿಂದೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ.
ಈ ವಿಚಾರವಾಗಿ ಅದಾಗಲೆ ರಾಜಿ ಸಂದಾನ ನಡೆದಿತ್ತು. ಆದರೆ ಇಂದು ಸಂಜೆ ವೇಳೆ ಮತ್ತೆ ಬಾಲಕಿಯನ್ನು ಕರೆದು ಮಾತಾಡಿಸಿದ್ದನ್ನು ಯಾರೋ ನೋಡಿದ ಹಿನ್ನೆಲೆ ನಾರಾಯಾಣ ನಾಯ್ಕ್ ಅವರನ್ನು ಯುವಕರ ತಂಡ ತಡೆದು ಹಲ್ಲೆಗೆ ಮುಂದಾಗಿದೆ. ಇದನ್ನು ನೋಡಿದ ಜಾರಪ್ಪ ನಾಯ್ಕ್ ಹಲ್ಲೆ ತಪ್ಪಿಸಲು ಬಂದಾಗ ಅವರನ್ನು ಯುವಕರು ತಳ್ಳಿದ್ದಾರೆ. ಕೆಳಗೆ ಬಿದ್ದ ಜಾರಪ್ಪ ನಾಯ್ಕ್ ಮತ್ತು ಗಂಭೀರ ಹಲ್ಲೆ ಗೊಳಗಾದ ನಾರಾಯಣ ನಾಯ್ಕ್ ಅವರನ್ನು ಜಾರಪ್ಪ ಅವರ ಮಗ ರಾಜಶೇಖರ್ ಬಂದು ವಾಹನದಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ.
ಈ ವೇಳೆ ಜಾರಪ್ಪ ನಾಯ್ಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ನಂತರ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು ನಾರಾಯಣ ನಾಯ್ಕ್ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಮಗ ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಚಂದ್ರಕಾಂತ ನಾಯ್ಕ, ಮನೋಹರ ಗೌಡ, ಹರಿಪ್ರಸಾದ ಪೂಜಾರಿ,ದೀಪಕ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.
ಜು.22 ರಂದು ಸಂಜೆ ಜಾರಪ್ಪ ನಾಯ್ಕ್ ರವರ ಮಗ ರಾಜಶೇಖರ ರಿಗೆ ವ್ಯಕ್ತಿಯೋರ್ವರು ಕರೆ ಮಾಡಿ ನಿನ್ನ ಚಿಕ್ಕಪ್ಪ ಹಾಗೂ ಇತರರಿಗೆ ಶಾಂತಿನಗರ ಎಂಬಲ್ಲಿ ಗಲಾಟೆ ಆಗುತ್ತಿದ್ದು ನೀನು ಕೂಡಲೇ ಬರುವಂತೆ ತಿಳಿಸಿದ್ದು, ಈ ವೇಳೆ ಜಾರಪ್ಪ ನಾಯ್ಕ್ ಮತ್ತು ಅವರ ಮಗ ರಾಜಶೇಖರ ಅಲ್ಲಿಗೆ ತೆರಳಿದ್ದು, ಜಾರಪ್ಪ ನಾಯ್ಕ್ ರವರು ನೀವುಗಳು ಯಾಕೇ ಗಲಾಟೆ ಮಾಡುತ್ತೀರಿ ಎಂದು ವಿಚಾರಿಸಿದಾಗ ಆರೋಪಿಗಳು ನಿನ್ನ ತಮ್ಮ ನಾರಾಯಣ ನಾಯ್ಕ ಇಲ್ಲಿ ಇರಬಾದೆಂದು ತಗಾದೆ ತೆಗೆದು ವಾಗ್ವಾದವಾಗಿ ನಂತರ ಜಾರಪ್ಪ ನಾಯ್ಕ ರವರನ್ನು ಕೈಯಿಂದ ದೂಡಿದಾಗ ಅವರು ನೆಲಕ್ಕೆ ಬೀಳುವಂತೆ ಮಾಡಿದ್ದು, ಈ ವೇಳೆ ಜಾರಪ್ಪ ರವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುದು ತಪಾಸಣೆಗೆ ಒಳಪಡಿಸಿದಾಗ ಜಾರಪ್ಪ ನಾಯ್ಕ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅಕ್ರ ಸಂ: 47/2022 ಕಲಂ: ಕಲಂ: 304 ಜೊತೆಗೆ 34 ಐಪಿಸಿ ಕಲಂ: 3(2)(v),3(2)(v-a) sc st act 2015 ಪ್ರಕರಣ ದಾಖಲಾಗಿದೆ.



























