ವಿಟ್ಲ: ಶೆಟ್ಟಿ ಸ್ಟುಡಿಯೋಸ್ ನ ಮಾಲಕರಾದ ಜನಾರ್ಧನ ಶೆಟ್ಟಿ (55) ರವರು ಬ್ರೈನ್ ಹ್ಯಾಮರೇಜ್ ನಿಂದಾಗಿ ಜು.23 ರಂದು ನಿಧನರಾದರು.

ಜನಾರ್ಧನ ಶೆಟ್ಟಿ ರವರು ಸುಮಾರು 30 ವರ್ಷಗಳಿಂದ ವಿಟ್ಲದಲ್ಲಿ ಫೋಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದರು.
ಮೃತರು ಪತ್ನಿ, ಓರ್ವ ಮಗ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನವನ್ನು ವಿಟ್ಲ ಕೆ.ಎಸ್.ಆರ್. ಟಿ. ಸಿ ಬಸ್ ನಿಲ್ದಾಣದಲ್ಲಿ ಕಲ್ಪಿಸಲಾಗಿದ್ದು, ಎಸ್.ಕೆ. ಪಿ.ಎ ವಿಟ್ಲ ಉಪವಲಯದ ಮುಖ್ಯಸ್ಥರು ಹಾಗೂ ಸದಸ್ಯರು ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದರು. ಮೃತರ ಅಂತ್ಯಕ್ರಿಯೆಯು ಕಾಟುಕುಕ್ಕೆಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.




























