ಮಾಣಿ: ಆಟೋ ರಿಕ್ಷಾವೊಂದು ಹಿಂಬದಿಯಿಂದ ಬಂದು ಲಾರಿಗೆ ಡಿಕ್ಕಿ ಹೊಡೆದ ಘಟನೆ ಜು.23 ರಂದು ಮಾಣಿ ಸಮೀಪದ ಸೂರಿಕುಮೇರು ರಾಜ್ ಕಮಲ್ ಸಭಾಭವನ ಬಳಿ ನಡೆದಿದೆ.

ಮಂಗಳೂರು ಮೂಲದ ಆಟೋ ರಿಕ್ಷಾವೊಂದು ಮಾಣಿಯಿಂದ ಕಲ್ಲಡ್ಕ ಕಡೆಗೆ ಹೋಗುತ್ತಿದ್ದ ವೇಳೆ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಅಪಘಾತದಿಂದಾಗಿ ಆಟೋ ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಕೆಲ ಕಾಲ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು.