ಪುತ್ತೂರು: ಖಾಸಗಿ ಸ್ಟಡಿ ಸೆಂಟರ್ ನಲ್ಲಿ ಭಿನ್ನಕೋಮಿನ ತಂಡಗಳ ನಡುವೆ ಜಗಳ ನಡೆದು ಹೊಡೆದಾಡಿಕೊಂಡ ಘಟನೆ ಜು.23 ರಂದು ಪುತ್ತೂರಿನಲ್ಲಿ ನಡೆದಿದೆ.

ಖಾಸಗಿ ಸ್ಟಡಿ ಸೆಂಟರ್ ನಲ್ಲಿ ಭಿನ್ನಕೋಮಿನ ತಂಡಗಳ ನಡುವೆ ಜಗಳ ನಡೆದು ಹೊಡೆದಾಡಿಕೊಂಡಿದ್ದು, ಘಟನೆಯಿಂದಾಗಿ ಹಲ್ಲೆಗೊಳಗಾದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಇಮ್ರಾನ್ ಎಂಬಾತ ಹೊರಗಿನಿಂದ ಯುವಕರನ್ನು ಕರೆ ತಂದು ಹಲ್ಲೆ ನಡೆಸಿದ್ದಾನೆ ಎಂದು ವಿಧ್ಯಾರ್ಥಿಗಳು ಆರೋಪಿಸಿದ್ದಾರೆ, ಅಷ್ಟೇ ಅಲ್ಲದೆ ಬಸ್ ನಿಲ್ದಾಣದಲ್ಲಿಯೂ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದು, ವಿದ್ಯಾರ್ಥಿಗಳಾದ ಕಾರ್ತಿಕ್ ಅಜ್ಜಿನಡ್ಕ ಮತ್ತು ಲಿತೀಶ್ ಕಬಕ ರವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ..