ಬಂಟ್ವಾಳ: ಬಂಟರ ಸಂಘ ಮಾಣಿ ವಲಯ ರಿ. ವತಿಯಿಂದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮವು ಜು.24 ರಂದು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಬಂಟರ ಸಂಘ ಮಾಣಿ ವಲಯದ ಸ್ಥಾಪಕಧ್ಯಕ್ಷರಾದ ರಘುರಾಮ ಶೆಟ್ಟಿ ರವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬಂಟರ ಸಂಘ ಮಾಣಿ ವಲಯದ ಅಧ್ಯಕ್ಷರಾದ ಎಂ. ಗಂಗಾಧರ ರೈ ಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಫುಲ್ಲಾ ಆರ್. ರೈ ಕಲ್ಲಾಜೆಗುತ್ತು. ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಬಂಟ್ವಾಳ ಬಂಟರ ಸಂಘದ ಸ್ಥಾಪಧ್ಯಕ್ಷರಾದ ಕಿರಣ್ ಹೆಗ್ಡೆ, ಬಂಟ್ವಾಳ ಬಂಟರ ಸಂಘದ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರಾದ ಗೋಪಾಲಕೃಷ್ಣ ರೈ ಬರಿಮಾರು, ಕಡೇಶಿವಾಲಯದ ನಾಟಿ ವೈದ್ಯೆ ಯಶೋಧ ಶೆಟ್ಟಿ ತೋಟ, ಸಾಹಿತಿ ವಿಂಧ್ಯಾ ಎಸ್ ರೈ, ನಿವೃತ್ತ ಶಿಕ್ಷಕರಾದ ರಾಜೀವ ಶೆಟ್ಟಿ ಇರುವೈಲು, ನಿವೃತ್ತ ಶಿಕ್ಷಕಿ ಸೇಸಮ್ಮ ಶೆಟ್ಟಿ ರವರು ಸನ್ಮಾನಿಸಲ್ಪಡಲಿದ್ದಾರೆ.
ಮಧ್ಯಾಹ್ನ 2 ಗಂಟೆಯಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ರೇವತಿ ಕಲಾ ಸಂಘ ಸಿದ್ಧಕಟ್ಟೆ ಇವರಿಂದ, ‘ಶ್ರೀಕೃಷ್ಣ ಸಂಧಾನ’ ತುಳು ಯಕ್ಷಗಾನ ತಾಳಮದ್ದಳೆ ನಡೆಯಲಿದೆ.