ಕಾರ್ಕಳ: ರಾಜ್ಯ ಮಟ್ಟದ ಕಬಡ್ಡಿ ಆಟಗಾರ, ಮುದ್ರಾಡಿಯ ಬಲ್ಲಾಡಿ ನಿವಾಸಿ ಸುಶಾಂತ್ ಶೆಟ್ಟಿ(32) ರವರು ಜು.22 ರ ರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.

ಅನಾರೋಗ್ಯಕ್ಕಿಡಾಗಿದ್ದ ಸುಶಾಂತ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೇ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಮೃತರು ತಂದೆ ಗುಣಕರ್ ಶೆಟ್ಟಿ, ತಾಯಿ, ಸಹೋದರ, ಸಹೋದರಿ, ಪತ್ನಿ ಹಾಗೂ ಒಂದು ವರ್ಷದ ಪುತ್ರನನ್ನು ಅಗಲಿದ್ದಾರೆ.