ಪುತ್ತೂರು: ಮಗುವಿಗೆ ಜನ್ಮನೀಡಿದ ಒಂದು ದಿನದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಮಹಿಳೆ ಮೃತಪಟ್ಟ ಘಟನೆ ಜು.23 ರಂದು ನಡೆದಿದೆ.
ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಪರಮಾರು ಮನೆಯ ಕೂಸಪ್ಪ ಗೌಡ ರವರ ಪತ್ನಿ ಮೋನಮ್ಮ (36) ಮೃತ ಮಹಿಳೆ.

ಎರಡನೇ ಮಗುವಿನ ಹೆರಿಗೆಗೆಂದು ಜು.21 ರಂದು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ. 22 ರಂದು ಸಂಜೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಬಾಣoತಿ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿದೆ.ಬಿಪಿ ಕಡಿಮೆಯಾಗಿದೆ ಕೂಡಲೇ ತಾಯಿಯನ್ನು ಮಂಗಳೂರಿನ ಆಸ್ಪತ್ರೆಗೆ
ಕರೆದುಕೊಂಡು ಹೋಗುವಂತೆ ಪುತ್ತೂರಿನ ವೈದ್ಯರು
ತಿಳಿಸಿದ್ದು, ತಕ್ಷಣ ಅವರನ್ನು ಪುತ್ತೂರಿನಿಂದ ಆಂಬ್ಯುಲೆನ್ಸ್
ಮೂಲಕ ಕರೆದುಕೊಂಡು ಹೋಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೇ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೋನಮ್ಮ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.