ಮಂಗಳೂರು: ಸ್ನೇಹಿತರೊಂದಿಗೆ ನದಿಗೆ ಈಜಲು ತೆರಳಿದ್ದ ಯುವಕನೋರ್ವ ನೀರುಪಾಲಾದ ಘಟನೆ ಉಳಾಯಿಬೆಟ್ಟು ಬದ್ರಿಯ ನಗರದಲ್ಲಿ ನಡೆದಿದೆ.
ಜೋಕಟ್ಟೆ ನಿವಾಸಿ ಆದಂ ಎಂಬವರ ಪುತ್ರ ಮುಹಮ್ಮದ್ ಶಿಯಾಝ್ (19) ಮೃತ ಯುವಕ.

ಜು.24 ರಂದು ಶಿಯಾಝ್ ಉಳಾಯಿಬೆಟ್ಟು ನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದು, ಸಂಜೆ ಸ್ನೇಹಿತರೊಂದಿಗೆ ಬದ್ರಿಯಾ ನಗರದ ಪೆರ್ಮುಂಕಿ ಕಾಯರಪದವುನಲ್ಲಿರುವ ನದಿಗೆ ಈಜಲು ತೆರಳಿದ್ದಾರೆ. ನದಿಯ ಆಳ ತಿಳಿಯದೆ ಈಜಲು ಇಳಿದಿದ್ದು, ಈ ವೇಳೆ ನೀರುಪಾಲಾಗಿದ್ದಾರೆ ಎನ್ನಲಾಗಿದೆ.

ತಕ್ಷಣ ಸ್ಥಳೀಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಉಳಿಸಲು ಸಾಧ್ಯವಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸಿಯಾಝ್ ತಂದೆ, ತಾಯಿ, ಓರ್ವ ಸಹೋದರಿ, ಸಹೋದರನನ್ನು ಅಗಲಿದ್ದಾರೆ.