ಬೆಳ್ತಂಗಡಿ: ಕಾರಿನಲ್ಲಿ ಬಂದ ತಂಡವೊಂದು ಯುವಕನೊಬ್ಬನನ್ನು ಬಲವಂತವಾಗಿ ಶಾಲೆಯೊಂದಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ ಘಟನೆ ಅಳದಂಗಡಿಯ ಕೆದ್ದು ಶಾಲೆ ಬಳಿ ನಡೆದಿದೆ.
ಲಾಯಿಲ ಅಂಕಾಜೆ ನಿವಾಸಿ ನಿಶೇತ್ (23) ಹಲ್ಲೆಗೆ ಒಳಗಾದ ಯುವಕ.

ನಿಶೇತ್ ನನ್ನು ಬೊಲೆರೋ ವಾಹನಲ್ಲಿ ಬಂದ ಸುಮಾರು 8 ಮಂದಿಯ ತಂಡ ಬಲವಂತವಾಗಿ ಎಳೆದೊಯ್ದು ಮಾರಣಾಂತಿಕ ಹಲ್ಲೆ ಮಾಡಿ, ಮೊಬೈಲ್ ಫೋನ್ ಮತ್ತು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದೆ ಎನ್ನಲಾಗಿದೆ.
ಯುವತಿಯ ವಿಚಾರಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗುತ್ತಿದ್ದು, ಘಟನೆ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.