ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ಜಂಕ್ಷನ್‌ನಲ್ಲಿ ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ ವತಿಯಿಂದ ನಿರ್ಮಾಣಗೊಂಡ ಅಶ್ವತ್ಥ ವೃತ್ತ ಹಾಗೂ ದಾರಿ ಸೂಚಕವನ್ನು ಜು.24 ರಂದು ಲೋಕಾರ್ಪಣೆಗೊಳಿಸಲಾಯಿತು.

ಊರಿನ ಹಿರಿಯರಾದ ಚಿದಂಬರ ನಾಯಕ್ ವೃತ್ತ ಹಾಗೂ ದಾರಿ
ಸೂಚಕವನ್ನು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾಜಿ ಸದಸ್ಯ ಮುಕುಂದ ಬಜತ್ತೂರು, ನಗರ ಸಭಾ ಸದಸ್ಯರಾದ ಸುಂದರ ಪೂಜಾರಿ ಬಡಾವು, ಲೀಲಾವತಿ ಕೃಷ್ಣನಗರ, ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯ ರಮೇಶ್ ಗೌಡ, ಸದಸ್ಯರಾದ ತಿಮ್ಮಪ್ಪ ಪೂಜಾರಿ, ರಾಘವೇಂದ್ರ, ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ
ರಾಮಚಂದ್ರ ಪೂಜಾರಿ ಶಾಂತಿನಗರ, ಬಿಜೆಪಿ ಕೈಗಾರಿಕಾ ಪ್ರಕೋಷದ ಅಧ್ಯಕ್ಷ ಚಿದಾನಂದ ರೈ, ರಾಧಾ ರೆಸಿಡೆನ್ಸಿಯ ಪ್ರವೀಣ್ ನಾಯಕ್, ಕೆಮ್ಮಾಯಿ ಶ್ರೀ ವಿಷ್ಣು ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುಧಾಕರ ನಾಯಕ್, ಬನ್ನೂರು ಗ್ರಾ.ಪಂ ಮಾಜಿ
ಅಧ್ಯಕ್ಷ ಜಿನ್ನಪ್ಪ ಗೌಡ ಕೊಲ್ಯ, ಮಾಜಿ ಸದಸ್ಯ ಅಣ್ಣಿ ಪೂಜಾರಿ, ಪ್ರಮುಖರಾದ ಸತೀಶ್ ಬಲ್ಯಾಯ, ಹೇಮಚಂದ್ರ, ಡಾ.ನಾರಾಯಣ ಭಟ್, ನಾಗೇಶ್ ಕೆ., ಲಿಂಗಪ್ಪ ಗೌಡ ಕೆಮ್ಮಾಯಿ, ಉಮೇಶ್ ಗೌಡ ಕೆಮ್ಮಾಯಿ, ಪ್ರದೀಪ್ ಭರತಪುರ, ಜಯೇಶ್ ತಾರಿಗುಡ್ಡೆ, ರಾಜೇಶ್ ಹೊಸೊಕ್ಕು, ಪ್ರವೀಣ್ ಬಡಾವು, ಪ್ರಕಾಶ್ ಹೊಸೊಕ್ಕು ಉಮಾವತಿ, ಜನಾರ್ಧನ ಪೇರಡಿ, ಪ್ರಶಾಂತ್ ಗೋವುದಕಾಡು, ಚಂದ್ರಶೇಖರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಕೆಮ್ಮಾಯಿ ಸ್ವಾಗತಿಸಿದರು. ನಾಗೇಶ್ ಟಿ.ಎಸ್ ವಂದಿಸಿದರು.