ಪುತ್ತೂರು: ಗಿಡ ಬಳ್ಳಿಗಳಿಂದ ತುಂಬಿದ ಕಾಫಿಕಾಡ್- ಮಿನ್ಪದವು- ಸೆಂಟ್ಯಾರ್ ರಸ್ತೆಯು ಸರಗಳ್ಳರ ಚಟುವಟಿಕೆಯ ತಾಣವಾಗಿದ್ದು, ಸಾರ್ವಜನಿಕರು, ಒಬ್ಬಂಟಿ ಮಹಿಳೆಯರು ಈ ರಸ್ತೆಯಲ್ಲಿ ನಡೆದಾಡಲು ಭಯ ಪಡುವಂತಾಗಿತ್ತು.

ಕಾಂಗ್ರೆಸ್ ಪ್ರಕೃತಿ ವಿಕೋಪ ನಿರ್ವಹಣಾ ತಂಡದಿಂದ ರಸ್ತೆಯ ಬಳಿ ಬೆಳೆದ ಗಿಡ ಬಳ್ಳಿಗಳು, ಮರಗಳ ಗೆಲ್ಲುಗಳನ್ನು ತೆಗೆದು ಸುಗಮ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಈ ವೇಳೆ ಸ್ಥಳಕ್ಕಾಗಮಿಸಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರವರು ಯುವಕರ ಜೊತೆಗೂಡಿ ತಾವು ಸ್ವಚ್ಛತಾ ಕಾರ್ಯಕ್ಕೆ ಸಾಥ್ ನೀಡಿದರು.

ಈ ರಸ್ತೆಯನ್ನು ಸ್ವಚ್ಛಗೊಳಿಸಿ ರಸ್ತೆಯ ಬಳಿ ಬೆಳೆದ ಗಿಡ ಬಳ್ಳಿಗಳು, ಮರಗಳ ಗೆಲ್ಲುಗಳನ್ನು ತೆಗೆದು ಸುಗಮ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪ್ರಕೃತಿ ವಿಕೋಪ ನಿರ್ವಹಣಾ ತಂಡಕ್ಕೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
