ಸುಬ್ರಹ್ಮಣ್ಯ: ಗ್ರಾಮ ಪಂಚಾಯತ್ ನ ವ್ತಾಪ್ತಿಯಲ್ಲಿ ಬರುವ ಏನೇಕಲ್ಲು-ನಡುಗಲ್ಲು ಸಂಪರ್ಕ ಕಲ್ಪಿಸುವ ಸಂಕಡ್ಕ ಎಂಬಲ್ಲಿ ಮೂರು ವಾರದ ಹಿಂದೆ ಗುಡ್ಡ ಕುಸಿತಗೊಂಡು ರಸ್ತೆ ಸಂಪರ್ಕ ಕಡಿಗೊಂಡಿತ್ತು.
ಈ ಬಗ್ಗೆ ಪಂಚಾಯತ್ ನ ಗಮನಕ್ಕೆ ತಂದರೂ ಕೂಡ ಯಾವುದೇ ಕ್ರಮವನ್ನು ಜರುಗಿಸದೆ ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಇದರಿಂದಾಗಿ ಅಸಮಾಧಾನಗೊಂಡ ಸ್ಥಳೀಯರು ಸ್ವತಃ ತಾವೇ ತಮ್ಮ ಸ್ವಂತ ಖರ್ಚಿನಲ್ಲಿ ಮಣ್ಣನ್ನು ತೆರವುಗೊಳಿಸುವ ಕಾರ್ಯ ನೆರವೇರಿಸಿದರು.

ಗುಡ್ಡ ಕುಸಿತಗೊಂಡು ರಸ್ತೆ ಸಂಪರ್ಕ ಕಡಿಗೊಂಡ ಹಿನ್ನೆಲೆ ಸ್ಥಳೀಯರು ತೀವ್ರ ಸಂಕಷ್ಟ ಎದುರಿಸಿದ್ದು, ಈ ಅವ್ಯವಸ್ಥೆಯಿಂದ ಬೇಸತ್ತ ಸ್ಥಳೀಯರು, ಸಾರ್ವಜನಿಕರು ಪಂಚಾಯತ್ ನ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.