ಕಾರ್ಕಳ: ತಾಲೂಕು ಕಚೇರಿಯ ಸರ್ಕಾರಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸುಶ್ಮಿತಾ (24) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಸುಶ್ಮಿತಾ ಹುಡ್ಕೊ ಕಾಲನಿ ನಿವಾಸಿಯಾಗಿದ್ದರು. ನಿನ್ನೆ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಮ್ಮ ಪ್ರತಿಭೆಯ ಆಧಾರದಲ್ಲಿ ಸರಕಾರಿ ನೌಕರಿ ಪಡೆದುಕೊಂಡಿದ್ದ ಈಕೆ ಕಚೇರಿಯಲ್ಲಿ ಉತ್ತಮ ಸಿಬ್ಬಂದಿ ಎಂಬ ಹೆಸರು ಸಂಪಾದಿಸಿದ್ದರು.
ಮೃತರು ತಂದೆ, ತಾಯಿ, ಓರ್ವ ಸಹೋದರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.