ಕಾಸರಗೋಡು: ಸ್ಪೋರ್ಟ್ಸ್ ಬಟ್ಟೆ ಖರೀದಿಸಿ ಅಳತೆ ಅಂದಾಜಿಸಲು ಟ್ರೈಯಲ್ ರೂಮ್ ಗೆ ತೆರೆಳಿದ ಯುವತಿ ಬಟ್ಟೆ ಬದಲಾಯಿಸುವ ದೃಶ್ಯವನ್ನು ರಹಸ್ಯವಾಗಿ ಸೆರೆ ಹಿಡಿಯಲು ಯತ್ನಿಸಿದ ಅಂಗಡಿ ನೌಕರನೊಬ್ಬನನ್ನು ಕುಂಬಳೆ ಪೊಲೀಸರು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಆಸಿಫ್ (24) ಎಂದು ಗುರುತಿಸಲಾಗಿದೆ.

ಬಟ್ಟೆ ಖರೀದಿಸಲು ಯುವತಿಯೊಬ್ಬಳು ತನ್ನ ಸಂಬಂಧಿಕರೊಂದಿಗೆ ಸ್ಪೋರ್ಟ್ಸ್ ಡ್ರೆಸ್ ಅಂಗಡಿಗೆ ಬಂದಿದ್ದು, ಈ ವೇಳೆ ಡ್ರೆಸ್ ಅಳತೆ ನೋಡಿ ಕೊಂಡು ಬನ್ನಿ ಎಂದು ಟ್ರೈಯಲ್ ರೂಮ್‌ಗೆ ನೌಕರ ಕಳುಹಿಸಿ ಈ ವೇಳೆ ತನ್ನ ಮೊಬೈಲ್ ಇರಿಸಿ ಯುವತಿ ಡ್ರೆಸ್ ಬದಲಾಯಿಸುವ ದೃಶ್ಯವನ್ನು ಸೆರೆ ಹಿಡಿಯಲು ಯತ್ನಿಸಿದ್ದಾನೆ.
ಆದರೆ ಇದನ್ನು ಗಮನಿಸಿ ಯುವತಿ ಈ ಬಗ್ಗೆ ಪ್ರಶ್ನಿಸಿ ಆರೋಪಿ ವಿರುದ್ದ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.