ಪುತ್ತೂರು: ಮುಂಡೂರು ಗ್ರಾಮದ ದೇವಸ್ಥಾನವೊಂದರ ಪ್ರಧಾನ ಅರ್ಚಕರೊಬ್ಬರು ಕಂಠ ಪೂರ್ತಿ ಕುಡಿದು ಅವಾಂತರ ಸೃಷ್ಟಿಸಿದ ಘಟನೆ ಜು.24 ರಂದು ರಾತ್ರಿ ವೇಳೆ ನಡೆದಿದೆ.

ಮದ್ಯದ ನಶೆಯಲ್ಲಿ ತೂರಾಡುತ್ತಿದ್ದ ಅರ್ಚಕರು ರಸ್ತೆಯಲ್ಲಿ ಬಿದ್ದು, ತಲೆಯ ಭಾಗಕ್ಕೆ ಗಾಯವಾಗಿದೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸ್ಥಳೀಯರ ಸಹಕಾರದಿಂದ ರಸ್ತೆಯಲ್ಲಿ ಬಿದ್ದಿದ್ದ ಅರ್ಚಕರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಮಾನದಲ್ಲಿದ್ದುಕೊಂಡು ಈ ರೀತಿಯಾಗಿ ಕುಡಿದು ಅವಾಂತರ ಸೃಷ್ಟಿಸಿದ ಕುಡುಕ ಅರ್ಚಕರನ್ನು ಮೃತ್ಯುಂಜಯೇಶ್ವರನೇ ಕಾಪಾಡಬೇಕಿದೆ..
