ಬಂಟ್ವಾಳ: ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಬಂಟ್ವಾಳ ತಾಲೂಕು, ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ಏಮಾಜೆಯ ಸಹಶಿಕ್ಷಕಿ ತ್ರಿವೇಣಿಯವರಿಗೆ ಜು.24 ರಂದು ಗೋವಾದಲ್ಲಿ ರೆಜೆನ್ಸಿ ಇಂಟರ್ ನ್ಯಾಷನಲ್ ಥಿಯೋಲಾಜಿಕಲ್ ಯೂನಿವರ್ಸಿಟಿ ಒಂಟಾರಿಯೋ, ಕೆನಡಾದ ವತಿಯಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಕಳೆದ 15 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವುದು ಮಾತ್ರವಲ್ಲದೇ, ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರು 2019-20 ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದರು.

ಇವರು ಬಂಟ್ವಾಳ ತಾಲೂಕು ಮೆಲ್ಕಾರ್ ಶಾಖೆಯ ಮೆಸ್ಕಾಂ ಉದ್ಯೋಗಿ ರಮೇಶ್ ಪೂಜಾರಿಯವರ ಪತ್ನಿಯಾಗಿದ್ದಾರೆ.



























