ಪುತ್ತೂರು: ದಲಿತ ಕಾರ್ಮಿಕರೊಬ್ಬರಿಗೆ ಮಾಜಿ ಸೈನಿಕರೊಬ್ಬರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ತೆಂಕಿಲ ನಿವಾಸಿ ದಲಿತ ಕಾರ್ಮಿಕ ರವಿ ಹಲ್ಲೆಗೊಳಗಾದ ವ್ಯಕ್ತಿ.

ಜು. 25 ರಂದು ಸಂಜೆ ಸರಕಾರಿ ನೌಕರರ ಸಭಾ ಭವನದ ಅಂಗಳವನ್ನು ಸ್ವಚ್ಛ ಗೊಳಿಸಿ ಈ ಕಸವನ್ನು ಸೈನಿಕ ಭವನದ ಆವರಣದ ಪಕ್ಕ ರಾಶಿ ಹಾಕಿದ ಕಾರಣಕ್ಕೆ ನಿವೃತ ಸೈನಿಕರೊಬ್ಬರು ರವಿಯವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ರವಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ರವಿ ಯವರ ಮೇಲೆ ಹಲ್ಲೆಯಾಗಿರುವ ಬಗ್ಗೆ ವಿಚಾರ ತಿಳಿದ ದಲಿತ ಸಂಘಟನೆ ಹಲವಾರು ಮುಖಂಡರು ಆಸ್ಪತ್ರೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.