ವಿಟ್ಲ: ಬಂಟ್ವಾಳ ತಾಲೂಕು ಕೊಳ್ಳಾಡು ಗ್ರಾಮದ ಬಸಬೆಟ್ಟುವಿನಿಂದ ನಾಪತ್ತೆಯಾಗಿದ್ದ ಯುವತಿಯೋರ್ವರನ್ನು ವಿಟ್ಲ ಠಾಣಾ ಪೊಲೀಸರು ಚಿಕ್ಕಮಗಳೂರು ಸಮೀಪದಿಂದ ಪತ್ತೆ ಹಚ್ಚಿದ್ದಾರೆ.
ಬಂಟ್ವಾಳ ತಾಲೂಕು ಕೊಳ್ಳಾಡು ಗ್ರಾಮದ ಬಸಬೆಟ್ಟು ನಿವಾಸಿ ರಝಾಕ್ ರವರ ಪುತ್ರಿ ಕೈರುನ್ನಿಸ(21) ರವರು ಜು.22 ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಅಬ್ದುಲ್ ಶರೀಫ್ ರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆಕೆ ವಿಟ್ಲದ ನೆಲ್ಲಿಗುಡ್ಡೆಯಲ್ಲಿರುವ ಪುತ್ತೂರು ಮುಕ್ವೆ ಮೂಲದ ಸಿದ್ದೀಕ್ ಎಂಬವರೊಂದಿಗೆ ತೆರಳಿರುವುದಾಗಿ ಅಬ್ದುಲ್ ಶರೀಫ್ ರವರು ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದರು.
ನಾಪತ್ತೆ ಪ್ರಕರಣ ದಾಖಲಿಸಿದ ಪೊಲೀಸರು ಹುಡುಕಾಟ ಆರಂಭಿಸಿ ಆಕೆಯನ್ನು ಚಿಕ್ಕಮಗಳೂರಿನಿಂದ ಪತ್ತೆ ಹಚ್ಚಿ ಕರೆತಂದಿದ್ದಾರೆ. ಬಳಿಕ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿ ಯುವತಿಯನ್ನು ಆಕೆಯ ಪೋಷಕರೊಂದಿಗೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿದು ಬಂದಿದೆ.