ಪುತ್ತೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್ ಇದರ ಸ್ಥಾಪನಾ ದಿನದ ಪ್ರಯುಕ್ತ ಹಲವು ವರುಷಗಳಿಂದ ಪುತ್ತೂರಿನಲ್ಲಿ ವಿಜೃಂಭಣೆಯಿಂದ ‘ಪುತ್ತೂರು ಮೊಸರು ಕುಡಿಕೆ ಉತ್ಸವ’ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿ ನಡೆಯುವ 12ನೇ ವರ್ಷದ ‘ಪುತ್ತೂರು ಮೊಸರು ಕುಡಿಕೆ ಉತ್ಸವ’ ಸಮಿತಿಯ ಅಧ್ಯಕ್ಷರಾಗಿ ಪಿ.ವಾಮನ ಪೈ,ಸಮಿತಿಯ ಸಂಚಾಲಕರಾಗಿ ಲಕ್ಷ್ಮಣ್ ಗೌಡ ಬೆಳ್ಳಿಪ್ಪಾಡಿ,ಸಮಿತಿಯ ಕಾರ್ಯದರ್ಶಿಯಾಗಿ ಶ್ರೀಧರ್ ತೆಂಕಿಲ,ಕೋಶಾಧಿಕಾರಿಯಾಗಿ ರೂಪೇಶ್ ಬಲ್ನಾಡ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರುಗಳಾಗಿ ಡಾ.ಸುರೇಶ್ ಪುತ್ತೂರಾಯ,ಅರುಣ್ ಕುಮಾರ್ ರೈ ಅನಾಜೆ,ಅಭಿಜೀತ್ ಕೊಡಿಪ್ಪಾಡಿ,ಯಶ್ ಕುಮಾರ್ ಮಕಾಡಿಯ, ಹರಿಣಿ ಪುತ್ತೂರಾಯ,ಶರಾವತಿ ತೆಂಕಿಲ, ಸಹ ಕಾರ್ಯದರ್ಶಿಗಳಾಗಿ ಕಿರಣ್ ಕುಮಾರ್ ರಾಮಕುಂಜ,ಅನಿಲ್ ಇರ್ದೆ ಮತ್ತು ಸಹ ಕೋಶಾಧಿಕಾರಿಗಳಾಗಿ ರವಿಕುಮಾರ್ ಕೈತ್ತಡ್ಕ,ಪ್ರವೀಣ್ ಕುಮಾರ್ ಕಲ್ಲೇಗ ಆಯ್ಕೆಯಾಗಿದ್ದಾರೆ.


























