ಪುತ್ತೂರು: ನೆಟ್ಟಣಿಗೆಮುಡ್ನೂರು ಪಂಚಾಯತ್ ನಲ್ಲಿ ಜು.28 ರಂದು ನಡೆಯಬೇಕಿದ್ದ ಸಾಮಾನ್ಯ ಸಭೆಯನ್ನು ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರು ಬಹಿಷ್ಕರಿಸಿದ್ದಾರೆ.
ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರುಗಳಾದ ಚಂದ್ರಹಾಸ ಈಶ್ವರಮಂಗಲ, ಪ್ರದೀಪ್ ರೈ ಕರ್ನೂರು, ಪ್ರಫುಲ್ಲ ಕರ್ನೂರು, ಕುಮಾರನಾಥ ಪೂಜಾರಿ ಕರ್ನೂರು, ವೆಂಕಪ್ಪ ನಾಯ್ಕ, ಶಶಿಕಲಾ, ಸವಿತಾ ಈಶ್ವರ ಪೂಜಾರಿ, ಪೂರ್ಣೇಶ್ವರಿ ರವರು ಇಂದು ನಡೆಯಬೇಕಿದ್ದ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದಾರೆ.
ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದ್ದರೂ ಕರ್ನಾಟಕ ಬಿಜೆಪಿ ಮುಖಂಡರ ಮೌನ ಹಾಗೂ ಕಠಿಣ ಕ್ರಮ ಎಂಬ ಬಾಯಿ ಮಾತಿಗೆ ಮನನೊಂದು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.


























