ಬೆಂಗಳೂರು: ದಿನದಿಂದ ದಿನಕ್ಕೆ ಡೆಂಗ್ಯೂ ಕೇಸ್ ಪ್ರಮಾಣ ಹೆಚ್ಚಾಗುತ್ತಲೆಯಿದ್ದು, ಮೂರು ಸಾವಿರತ್ತ ಡೆಂಘಿ ಕೇಸ್ಗಳ ಸಂಖ್ಯೆ ದಾಖಾಲಾಗಿದೆ. ರಾಜ್ಯದಲ್ಲಿ ಎರಡು ತಿಂಗಳ ಅಂತರದಲ್ಲಿ ಡೆಂಗ್ಯೂ ಕೇಸ್ಗಳ ಪ್ರಮಾಣ ದುಪ್ಪಟ್ಟಾಗಿದೆ. ರಾಜ್ಯದ 176 ತಾಲೂಕಿನ 1807 ಹಳ್ಳಿಗಳಲ್ಲಿ ಡೆಂಗ್ಯೂ ಕೇಸ್ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ 800ಕ್ಕೆ ಡೆಂಗ್ಯೂ ಕೇಸ್ ಪ್ರಮಾಣ ಏರಿಕೆಯಾಗಿದೆ. ಮಳೆಗಾಲದಲ್ಲಿ 3 ಪಟ್ಟು ಹೆಚ್ಚಾಗುತ್ತಿದ್ದು, ಮೇ ತಿಂಗಳಲ್ಲಿ 1100 ರಷ್ಟಿದ್ದ ಕೇಸ್ಗಳು ಜುಲೈ ತಿಂಗಳ ಅಂತ್ಯಕ್ಕೆ 3035 ಕ್ಕೆ ಏರಿಕೆ ಆಗಿದೆ. ಕೇವಲ ಎರಡು ತಿಂಗಳ ಅಂತರದಲ್ಲಿ 3 ಪಟ್ಟು ಕೇಸ್ಗಳು ಹೆಚ್ಚಳವಾಗಿದ್ದು, ರಾಜ್ಯದಲ್ಲಿ 10 ಜಿಲ್ಲೆಗಳಲ್ಲಿ ಡೆಂಗ್ಯೂ ಕೇಸ್ಗಳು ಹೆಚ್ಚಾಗುತ್ತಿದ್ದಂತೆ ವೈದ್ಯರುಗಳಿಂದ ಎಚ್ಚರಿಕೆ ನೀಡಿದ್ದಾರೆ.
ಯಾವ್ಯವ ಜಿಲ್ಲೆಗಳಲ್ಲಿ ಕೇಸ್ಗಳು ಹೆಚ್ಚಾಗಿವೆ ಎನ್ನುವುದನ್ನ ನೋಡುವುದಾದರೆ
ಮೈಸೂರು – 349 ಉಡುಪಿ – 377 ದಕ್ಷಿಣ ಕನ್ನಡ – 190 ಶಿವಮೊಗ್ಗ – 175 ಚಿತ್ರದುರ್ಗ – 170 ಮಂಡ್ಯ – 102 ಹಾಸನ – 132 ವಿಜಯಪುರ – 128 ಬೆಳಗಾವಿ – 116 ದಾವಣಗೆರೆ – 119 ಕಲಬುರುಗಿ – 105 ರಷ್ಟು ಕೇಸ್ಗಳು ಹೆಚ್ಚಾಗಿವೆ.
ಇನ್ನು ಡೆಂಗ್ಯೂ ಕೇಸ್ಗಳ ಜೊತೆಗೆ ಚಿಕನ್ ಗುನ್ಯ ಕೇಸ್ಗಳ ಪ್ರಮಾಣವು ಹೆಚ್ಚಾಗಿದ್ದು, ಎರಡು ತಿಂಗಳ ಹಿಂದೆ 482 ಕೇಸ್ಗಳು 852 ಕ್ಕೆ ಏರಿಕೆಯಾಗಿವೆ.



























