ಬೆಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಎನ್‌ಐಎಗೆ ಹಸ್ತಾಂತರ ಮಾಡಿದೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಸಂಬಂಧ ಡಿಜಿ, ಐಜಿ ಅವರೊಂದಿಗೆ ಚರ್ಚೆ ಮಾಡಿದ್ದೀನಿ. ವ್ಯವಸ್ಥಿತ ಪ್ರಕರಣ ಹಾಗೂ ಅಂತರ್ ರಾಜ್ಯ ಸಂಬಂಧ ಇರೋ ಕಾರಣ ಎನ್‌ಐಎ ಹಸ್ತಾಂತರ ಮಾಡಲು ಪತ್ರ ಬರೆಯಲು ಸೂಚನೆ ನೀಡಿದ್ದೇನೆ. ಪ್ರಕರಣ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಸೂಚನೆ ನೀಡಿದ್ದೇನೆ. ಗೃಹ ಸಚಿವಾಲಯ ಈ ಬಗ್ಗೆ ಅಗತ್ಯ ಸಂವಹನವನ್ನು ಮಾಡುತ್ತೆ ಎಂದು ಸ್ಪಷ್ಟಪಡಿಸಿದರು.
ಕೇರಳ ಗಡಿ ಪ್ರದೇಶದಲ್ಲಿ ಸಂಪೂರ್ಣವಾಗಿ ಚೆಕ್ ಪೋಸ್ಟ್ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು. ಪ್ರಮುಖ ಸಂಪರ್ಕ ಸ್ಥಳಗಳು ಹಾಗೂ ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಕ್ಯಾಂಪ್‌ಗಳನ್ನು ಹಾಕುವುದು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗೂ ಕೆಎಸ್‌ಆರ್‌ಫಿ ಇನ್ನೊಂದು ಬೆಟಾಲಿಯನ್ ಅನ್ನು ದಕ್ಷಿಣ ಕನ್ನಡಕ್ಕೆ ಶಿಫ್ಟ್ ಮಾಡುವುದು ಸೇರಿದಂತೆ ರಾತ್ರಿ ಗಸ್ತನ್ನು ಹೆಚ್ಚು ಮಾಡುವ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಎಂ ವಿವರಣೆ ನೀಡಿದರು.


























