ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಹೆತ್ತವರ ಸಭೆಯು ಜರುಗಿತು.

ಶಿಕ್ಷಣವೆಂದರೆ ಮಗುವಿನ ಸರ್ವತೋಮುಖ ವಿಕಾಸಕ್ಕೆ ಪೂರಕವಾದ ಕ್ಷೇತ್ರ. ಪ್ರತಿಯೊಂದು ಮಗುವಿನಲ್ಲಿರುವ ಪ್ರತಿಭೆ ಹೊರಹೊಮ್ಮುವ ವಾತಾವರಣ ಶಾಲೆಯಲ್ಲಿರಬೇಕು. ಎಂದು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಲೀಡ್ಸ್ ಅಕಾಡೆಮಿಕ್ ಎಕ್ಸಲೆನ್ಸ್ ನ ಮ್ಯಾನೇಜರ್ ಸ್ವಾತಿ ಶೆಟ್ಟಿ ಯವರು ಲೀಡ್ ಪಠ್ಯಕ್ರಮ ಮತ್ತು ಕೋಡಿಂಗ್ ಸಿಸ್ಟಮ್ ನ ಬಗ್ಗೆ ವಿವರಿಸಿದರು.

ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಜೇಸಿ ಹೆಚ್ ಜಿ ಎಫ್ ಶ್ರೀಧರ್ ಕೊಡಕ್ಕಲ್ ರವರು ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಸಂಸ್ಕಾರವನ್ನು ಬೆಳೆಸಬೇಕು ಅಲ್ಲದೆ ಮಕ್ಕಳ ನಡುವೆ ಅನಗತ್ಯ ಹೋಲಿಕೆ ಮಾಡಿ ಒತ್ತಡ ಹಾಕಬಾರದು ಎಂದು ಪೋಷಕರಿಗೆ ಸಲಹೆ ನೀಡಿದರು.
ಪ್ರೌಢಶಾಲಾ ವಿದ್ಯಾರ್ಥಿಗಳ ಪೋಷಕರಿಗೆ ಜೇಸಿ ಶಾಲಾ ಶೈಕ್ಷಣಿಕ ಸಲಹೆಗಾರರು ಮತ್ತು ನರೇಂದ್ರ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಯು ಎಸ್ ವಿಶ್ವೇಶ್ವರ ಭಟ್ ಮಾತನಾಡುತ್ತಾ, ಪ್ರಶ್ನೆಗಳು ಜ್ಞಾನದ ಕೀಲಿ ಕೈ ಮತ್ತು ಪ್ರಶ್ನಿಸುವ ಮನೋಭಾವ ಮಕ್ಕಳಲ್ಲಿ ಇರಬೇಕು. ಮಕ್ಕಳನ್ನು ಸ್ವತಂತ್ರವಾಗಿ ಬಿಟ್ಟು ಅವರ ಆಲೋಚನೆಗೆ ಪ್ರಾಶಸ್ತ್ಯ ನೀಡಿದಾಗ ನಮ್ಮ ದೇಶ ಜವಾಬ್ದಾರಿಯುತ ಪ್ರಜೆಗಳನ್ನು ಪಡೆಯಲು ಸಾಧ್ಯ ಎಂದು ಹೇಳುತ್ತಾ ಹದಿ ಹರೆಯದ ಮಕ್ಕಳ ಸೂಕ್ಷ್ಮ ವಿಚಾರಗಳನ್ನು ತಿಳಿಸಿ ನಮ್ಮ ಮಕ್ಕಳ ನಡೆ-ನುಡಿಗಳ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ಎಲ್ಎನ್ ಕೂಡೂರು ರವರು ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮತ್ತು ವಿದ್ಯಾರ್ಥಿಗಳ ಕ್ರಿಯಾಶೀಲತೆಯ ಬಗ್ಗೆ ಸಲಹೆ ನೀಡುತ್ತಾ ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡುವ ಎಲ್ಲಾ ಮಕ್ಕಳು ಆತ್ಮವಿಶ್ವಾಸ ಮತ್ತು ದೃಢ ಮನೋಭಾವವುಳ್ಳ ವಿದ್ಯಾರ್ಥಿಯಾಗಿ ಹೊರಹೊಮ್ಮುವಂತಾಗಬೇಕು ಎಂದು ನುಡಿದರು.

ಅನುಕ್ರಮವಾಗಿ ಆಯೋಜಿಸಿದ ಈ ಶಿಕ್ಷಕ – ರಕ್ಷಕರ ಸಭೆಯಲ್ಲಿ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕಾದ ಸಲಹೆ ಸೂಚನೆಗಳ ಬಗ್ಗೆ ಶಿಕ್ಷಕಿಯರಾದ ಭಾವನ, ಗೀತಾ, ಗೀತಾ ಆರ್ ಹಾಗೂ ಕವಿತಾ ಇವರು ಪೋಷಕರಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಧರ್ ಶೆಟ್ಟಿ, ಪ್ರಕಾಶ್ ಕುಕ್ಕಿಲ, ಹಸನ್ ವಿಟ್ಲ, ಮೋಹನ ಎ, ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ಎ, ಪ್ರಾಂಶುಪಾಲರಾದ ಜಯರಾಮ್ ರೈ, ಉಪ ಪ್ರಾಂಶುಪಾಲೆಯರಾದ ಜ್ಯೋತಿ ಶೆಣೈ ಹಾಗೂ ಹೇಮಲತಾ ರವರು ಉಪಸ್ಥಿತರಿದ್ದರು. ಶಿಕ್ಷಕರಾದ ವಿದ್ಯಾ,ಶೀಲಾ, ಹರ್ಷಿತ,ರೇಖಾ ಹಾಗೂ ಗುರುವಪ್ಪ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ರೂಪ ಹಾಗೂ ತೇಜಸ್ವಿನಿ ಪ್ರಾರ್ಥಿಸಿದರು. ಎಲ್ಲಾ ಶಿಕ್ಷಕರ ವೃಂದದವರು ಉಪಸ್ಥಿತರಿದ್ದರು.































