ಬಂಟ್ವಾಳ: ತಾಲೂಕು ವಿಟ್ಲ ಗ್ರಾಮದ ಅನಿಲಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಸುದೀರ್ಘ 31 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆ ರೇವತಿ ರವರಿಗೆ ಬೀಳ್ಕೊಡುಗೆ ಸಮಾರಂಭ ಸ್ತ್ರೀಶಕ್ತಿ ಸಂಘ ಅನಿಲಕಟ್ಟೆ ಇದರ ವತಿಯಿಂದ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ವಿಟ್ಲ ಪಟ್ಟಣ ಪಂಚಾಯತ್ ನ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅನಿಲಕಟ್ಟೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಯಮುನಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನವೀನ್ ಖಂಡಿಗ, ಅಂಗನವಾಡಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಪುಷ್ಪಾ, ಶಿಶು ಮತ್ತು ಮಹಿಳಾ ಅಭಿವೃಧ್ಧಿ ಇಲಾಖಾ ಮೇಲ್ವಿಚಾರಕಿ ರೋಹಿಣಿ, ಆರೋಗ್ಯ ಸಂರಕ್ಷಣಾಧಿಕಾರಿಗಳಾದ ಚಂದ್ರಾವತಿ, ಸುಜಾತ, ಸಿ ಎಚ್ ಓ ಆಶಾಲತಾ, ಉಪಸ್ಥಿತರಿದ್ದರು. ಹೇಮಾವತಿಯವರು ಸ್ವಾಗತಿಸಿ. ಪವಿತ್ರ ವಂದಿಸಿದರು. ಜಯಲಕ್ಷ್ಮಿ ವಸಂತ್ ರವರು ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಮಕ್ಕಳ ಪೋಷಕರು ಸ್ತ್ರೀ ಶಕ್ತಿ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





























