ಮಂಗಳೂರು: ದಕ್ಷಿಣ ಜಿಲ್ಲೆಯಲ್ಲಿ ವ್ಯಾಪಾರೋದ್ಯಮಗಳಿಗೆ ಸಂಜೆ 6ರ ಬಳಿಕ ನಿರ್ಬಂಧ ಹಾಕಿರುವುದರಿಂದ ಸಾಮಾನ್ಯ ಜನತೆಗೆ ಆಗಿರುವ ತೊಂದರೆ ಆಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ ಶಾಂತಿ ಸಭೆಗಳನ್ನು ಕರೆದು ವಾತಾವರಣವನ್ನು ತಿಳಿಗೊಳಿಸಬೇಕು ಎಂದು ದಕ್ಷಿಣಕನ್ನಡ ಜಿಲ್ಲಾ ಆಮ್ ಆದ್ಮಿ ಪಕ್ಷದ ಪರವಾಗಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪಾರ ಜಿಲ್ಲಾಧಿಕಾರಿಗಳು ಮತ್ತು ಮಂಗಳೂರು ಪೊಲೀಸ್ ಕಮಿಷನರ್ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ, ಮಾದ್ಯಮ ಸಂಚಾಲಕ ವೆಂಕಟೇಶ್ ಬಾಳಿಗಾ, ಡೆಸ್ಮಂಡ್ ಡಿಸೋಜಾ, ಸ್ಟೀಫನ್ ಪಿಂಟೋ, ರವಿಪ್ರಸಾದ್, ಆಮ್ ಆದ್ಮಿ ಪಾರ್ಟಿ ಮಂಗಳೂರು ಉತ್ತರ ಅಧ್ಯಕ್ಷ ನವಿನ್ ಚಂದ್ರ ಪೂಜಾರಿ, ರೋನಿ ಕ್ರಾಸ್ತಾ, ಬೆನೆಟ್ ಮೊರಾಸ್, ವಿದ್ಯಾ ರಾಕೇಶ್, ಪ್ರಥ್ವಿರಾಜ್, ಶಾನನ್ ಪಿಂಟೋ, ಕೆ. ಎನ್. ಶ್ರೀನಿವಾಸ್, ನವೀನ್ ಡಿಸೋಜಾ ಉಪಸ್ಥಿತರಿದ್ದರು.