ದಾವಣಗೆರೆ: ಕರಾವಳಿಯಲ್ಲಿ ಇತ್ತೀಚೆಗೆ ಮೂರು ಕೊಲೆಗಳಾಗಿವೆ. ಮಸೂದ್, ಪ್ರವೀಣ್, ಫಾಝಿಲ್ ಕೊಲೆ ಆಯ್ತು. ಬೊಮ್ಮಾಯಿ ಇಡೀ ಕರ್ನಾಟಕದ ಮುಖ್ಯಮಂತ್ರಿ ನಾ..??? ಅಥವಾ ಒಂದು ಧರ್ಮಕ್ಕೆ ಸೇರಿದ ಮುಖ್ಯಮಂತ್ರಿ ನಾ.?? ಬೊಮ್ಮಾಯಿ ಪ್ರವೀಣ್‌ಗೆ ಪರಿಹಾರ ಕೊಟ್ಟಂತೆ ಯಾಕೆ ಮಸೂದ್, ಫಾಝಿಲ್‌ಗೆ ಕೊಡ್ಲಿಲ್ಲ..?? ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಹೇಳಲು ನೈತಿಕತೆ ಇಲ್ಲ. ಬೊಮ್ಮಾಯಿಗೆ ರಾಜ್ಯ ಆಳಲು ನೈತಿಕತೆ ಇಲ್ಲ. ಅಲ್ಪಸಂಖ್ಯಾತರು ಭಯದಲ್ಲಿ ಬದುಕುತ್ತಿದ್ದಾರೆ. ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಸಿದ್ದರಾಮಯ್ಯ ನವರು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ 75ನೇ ಜನ್ಮದಿನದ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿದ್ಧರಾಮೋತ್ಸವ ಕಾರ್ಯಕ್ರಮದಲ್ಲಿ ಕರಾವಳಿಯ ಹತ್ಯೆಗಳ ಬಗ್ಗೆ ಪ್ರಸ್ತಾಪ..!!
ಕರಾವಳಿಯಲ್ಲಿ ಇತ್ತೀಚೆಗೆ 15 ದಿನಗಳಲ್ಲಿ ಮೂರು ಕೊಲೆ ಗಳಾಗಿವೆ. ಆದ್ರೇ ಭಾರತೀಯ ಜನತಾ ಪಾರ್ಟಿಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರವೀಣ್ ಮನೆಗೆ ಮಾತ್ರ ಹೋಗಿದ್ದಾರೆ. ಮಸೂದ್ ಕೊಲೆಯಾಗಿತ್ತು, ಪ್ರವೀಣ್ ಕೊಲೆಯಾಗಿತ್ತು, ಫಾಸಿಲ್ ಕೊಲೆಯಾಗಿತ್ತು., ನೀವು ಇಡೀ ಕರ್ನಾಟಕದ ಮುಖ್ಯ ಮಂತ್ರಿಯೋ ಅಥವಾ ಒಂದು ಧರ್ಮದ ಮುಖ್ಯಮಂತ್ರಿಯೋ, ಪ್ರವೀಣ್ ಮನೆಗೆ ಭೇಟಿ ಕೊಟ್ರಿ, ಪರಿಹಾರ ಕೊಟ್ರಿ, ತಪ್ಪೇನಿಲ್ಲ ಪರಿಹಾರ ಕೊಡ್ಲೆ ಬೇಕು ಆದರೆ ನಿಮಗೆ ಮಸೂದ್ ಮನೆ ಫಾಸಿಲ್ ಮನೆ ಕಂಡಿಲ್ವಾ..!?? ಎಂದು ಪ್ರಶ್ನೆ ಮಾಡಿದರು.
ಸಬ್ ಕ ಸಾಥ್ ಸಬ್ ಕ ವಿಕಾಸ್ ಅಂತ ಹೇಳಕ್ಕೆ ನಿಮಗೆ ನೈತಿಕತೆ ಇದೆಯಾ..!!??, ನೀವು ಈ ರಾಜ್ಯ ಮುನ್ನಡೆಸಲು ಲಾಯಕ್ಕಾ, ರಾಜ್ಯದ ಮುಖ್ಯಮಂತ್ರಿ ಜಾಗಕ್ಕೆ ಲಾಯಾಕ್ಕಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ರು.., ನಿಮಗೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ನಾವು ಸಂವಿಧಾನದ ಮೇಲೆ ಪ್ರಮಾಣ ಮಾಡ್ತೇವೆ ಕರ್ನಾಟಕದ ಆರೂವರೆ ಕೋಟಿ ಜನರನ್ನ ಅವರ ಆಸ್ತಿ ಪಾಸ್ತಿ ,ಮಾನ ಮರ್ಯಾದೆ, ಜೀವ ರಕ್ಷಣೆ ಮಾಡುವಂತಹ ಜವಾಬ್ದಾರಿ ನಮ್ಮದು ಅಂತ ಹೇಳ್ತೀವಿ.. ಇವತ್ತು ಈ ಘಟನೆಗಳಿಂದ ಅಲ್ಪಸಂಖ್ಯಾತರು ಆತಂಕದಿಂದ ಬದುಕುತ್ತಿದ್ದಾರೆ.
ಇವತ್ತು ಭ್ರಷ್ಟಾಚಾರದ 40 ಪರ್ಸೆಂಟ್ ನಡೀತಿದೆ. ಸಂತೋಷ್ ಪಾಟೀಲ್ ಲಂಚ ಕೊಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡರು..ಅದಕ್ಕೆ ನಿಮ್ಮ ಮಂತ್ರಿ ರಾಜೀನಾಮೆ ಕೊಟ್ಟು ಹೋದರು, ಆದ್ರೆ ಆ ಪ್ರಕರಣವನ್ನು ಮುಚ್ಚಿ ಹಾಕಲು ಹೊರಟಿದ್ದೀರಿ, ದ್ವೇಷದ ರಾಜಕಾರಣ ಮಾಡಲು ಹೊರಟಿದ್ದೀರಿ ಮೋದಿಯವರೇ ಎಷ್ಟು ಸಮಯ ದ್ವೇಷದ ರಾಜಕಾರಣ ಮಾಡಲು ಆಗುತ್ತೆ ಜನಶಕ್ತಿಯ ಮುಂದೆ ರಾಜ್ಯ ಶಕ್ತಿ ಯಾವತ್ತೂ ಅಂಕುಶ ಇಟ್ಟುಕೊಳ್ಳಲು ಸಾದ್ಯವಿಲ್ಲ, ಜನಶಕ್ತಿ ಎದ್ದೇ ಏಳುತ್ತೇ ಎಂದು ಬಿಜೆಪಿ ವಿರುದ್ಧ ಕಾರ್ಯಕ್ರಮದಲ್ಲಿ ವಾಗ್ಧಳಿ ನಡೆಸಿದರು.
ನಾವೆಲ್ಲರೂ ಸೇರಿ ಈ ಸೇಡಿನ ರಾಜಕೀಯ ಮಾಡುವಂತ ಕೋಮುವಾದಿ ಭ್ರಷ್ಟ ಬಿಜೆಪಿಯನ್ನಾ ಎಷ್ಟು, ಜಾಗದಿಂದ ತಿಕ್ಕೋಳ್ಳಿಕ್ಕೆ ಸಾಧ್ಯವಾಗುತ್ತದೆ ಅಷ್ಟು ದೇಶ ಉದ್ಧಾರ ಆಗುತ್ತದೆ ಎಂದರು..