ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ )ಬಂಟ್ವಾಳ ಇದರ ತುಂಬೆ ವಲಯದ ನರಿಕೊಂಬು ಎ ಮತ್ತು ಬಿ ಒಕ್ಕೂಟದ ಕಾರ್ಯ ಕ್ಷೇತ್ರದ ನರಿಕೊಂಬು ಗ್ರಾಮದ ದೋಟ ಮಾಧವ ಶಮಿಕ ಸಫಲ್ಯ ಇವರ ಮನೆಯಲ್ಲಿ ಯಾಂತ್ರಿಕೃತ ಭತ್ತದ ಕೃಷಿ ಮಾಹಿತಿ ಹಾಗೂ ಪ್ರಾತ್ಯಕ್ಷತೆ ಕಾರ್ಯಕ್ರಮ ನರಿಕೊಂಬು ಬಿ ಒಕ್ಕೂಟದ ಅಧ್ಯಕ್ಷರಾದ ಜಯಂತ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಆಧುನಿಕ ಪದ್ಧತಿಯಲ್ಲಿ ಯಾಂತ್ರಿಕೃತ ಕೃಷಿಯ ಮೂಲಕ ಭತ್ತದ ಕೃಷಿ ಮಾಡುವುದರಿಂದ ಆಗುವ ಪ್ರಯೋಜನ ಹಾಗೂ ಯೋಜನೆಯ ಮೂಲಕ ಸಿಗುವ ಸಹಕಾರವನ್ನು ತಿಳಿಸಿದರು.
ಸಿ ಎಚ್ ಎಸ್ ಸಿ ಕೃಷಿ ಯೋಜನಾಧಿಕಾರಿ ಉಮೇಶ್ ರವರು ಬತ್ತದ ಕೃಷಿಗೆ ಬೀಜಗಳ ಆಯ್ಕೆ ಯಾಂತ್ರಿಕದ ಕೃಷಿಗೆ ತಟ್ಟೆಯಲ್ಲಿ ನೇಜಿ ಹಾಕುವ ರೀತಿ ನಾಟಿ ಮಾಡುವ ವಿಧಾನ ಇವುಗಳ ಬಗ್ಗೆ ಪ್ರಾತ್ಯಕ್ಷಿತೆಯ ಮೂಲಕ ಸವಿವರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಕೃಷಿ ಅಧಿಕಾರಿಗಳಾದ ಬಸವರಾಜ್ ತಾಲೂಕಿನ ಕೃಷಿ ಕೇಂದ್ರದ ಮೂಲಕ ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ನರಿಕೊಂಬು ಗ್ರಾಮ ವ್ಯಾಪ್ತಿಯ ಸುಮಾರು 60 ಮಂದಿ ಭತ್ತದ ಕೃಷಿ ಮಾಡುವ ರೈತಾಪಿ ವರ್ಗದವರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಗ್ರಾಮಅಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಾನಂದ ಪಿ, ಪ್ರಗತಿಪರ ಕೃಷಿಕರುಗಳಾದ ಗಂಗಯ್ಯ ಪೂಜಾರಿ ಕೊಡಂಗೆ ಕೊಡಿ, ಪ್ರೇಮನಾಥ್ ಶೆಟ್ಟಿ ಅಂತರ, ನರಿಕೊಂಬು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಅಂಚನ್, ಬಂಟ್ವಾಳ ತಾಲೂಕು ಕೃಷಿ ಅಧಿಕಾರಿ ಹನುಮಂತ ,ನರಿಕೊಂಬು ಎ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಸಫಲ್ಯ, ಮಾಧವ ಸಫಲ್ಯ ಮೊದಲಾದವರು ಉಪಸ್ಥಿತರಿದ್ದರು. ಯೋಜನೆಯ ಕೃಷಿ ಅಧಿಕಾರಿ ಜನಾರ್ಧನ್ ಸ್ವಾಗತಿಸಿ, ಸೇವಾ ಪ್ರತಿನಿಧಿ ಕುಸುಮಾವತಿ ವಂದಿಸಿದರು. ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್ ಕಾರ್ಯಕ್ರಮ ನಿರ್ವಹಿಸಿದರು. ಸೇವಾ ಪ್ರತಿನಿಧಿ ಪ್ರತಿಭಾ ಸಹಕರಿಸಿದರು.