ಪುತ್ತೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಮಾರ್ಗದರ್ಶನದಂತೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕನಗರ ತೆಂಕಿಲದಲ್ಲಿ ‘ಸ್ಕೌಟಿಂಗ್ ಸನ್ ರೈಸ್ ಡೇ’ ಮತ್ತು ‘ಸ್ಕೌಟ್ ಸ್ಕಾರ್ಫ್ ಡೇ’ ಅನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಕೌಟ್ ಪ್ರತಿಜ್ಞೆಯ ಉಚ್ಚಾರಣೆ ಸ್ವೀಕರಿಸಿ, ಸ್ಕೌಟಿಂಗ್ ಮತ್ತು ಗೈಡಿಂಗ್ ಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಸ್ಕೌಟ್ ಮತ್ತು ಗೈಡ್ ಇತಿಹಾಸ, ಉದ್ದೇಶಗಳು ಮತ್ತು ಈ ದಿನದ ಮಹತ್ವದ ಬಗ್ಗೆ ಗೈಡ್ ಕ್ಯಾಪ್ಟನ್ ಅನುರಾಧ .ಎ.(ಹೆಚ್.ಡಬ್ಲ್ಯು.ಎ) ರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಸ್ಕಾರ್ಫ್ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಮತ್ತು ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು. ಮಹೇಶ್ ವರ್ಮ ಇವರು ಕಾರ್ಯಕ್ರಮ ನಿರ್ವಹಿಸಿದರು.