ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಯು ಡಿ ಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಪರ ಚುನಾವಣಾ ಪ್ರಚಾರದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸೂಚನೆ ಮೇರೆಗೆ ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಪೂವನಡ್ಕ ಮತ್ತಿತರಕಡೆ ಮತಯಾಚನೆ ಮಾಡಿದರು. ಇವರೊಂದಿಗೆ ಕಾಂಗ್ರೆಸ್ ನಾಯಕರಾದ ಇಸಾಕ್ ಸಾಲ್ಮರ ,ಗಂಗಾಧರ ಶೆಟ್ಟಿ ,ಬಾಬು ಮರಿಕೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಪ್ಪಳ ಯುಡಿಎಫ್ ಕಛೇರಿಗೆ ಭೇಟಿ ನೀಡಿದರು. ಯುಡಿಫ್ ಅಧ್ಯಕ್ಷ ಮಂಜುನಾಥ ಆಳ್ವ, ಸೆಕ್ರೆಟರಿ ಇಬ್ರಾಹಿಂ, ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಮತ್ತಿತರ ನಾಯಕರು ಬರಮಾಡಿಕೊಂಡರು.