ವಿಟ್ಲ: ವ್ಯಕ್ತಿಗಿಂತ ಪಕ್ಷ – ಸಂಘಟನಾ ಶಕ್ತಿ ಮುಖ್ಯ ಎಂಬುದನ್ನು ಮಾಣಿಲ ಉಪಚುನಾವಣೆಯಲ್ಲಿ ಕಾರ್ಯಕರ್ತರು ಸಾಧಿಸಿದ್ದಾರೆ ಎಂದು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ. ಬಿ. ಹೇಳಿದರು. ಅವರು ಮಾಣಿಲದಲ್ಲಿ ಗ್ರಾಮ ಪಂಚಾಯಿತಿ ಒಂದನೇ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ವ್ಯಕ್ತಿಗೆ ಶಕ್ತಿ ನೀಡುವುದು ಸಂಘಟನೆ, ಪಕ್ಷದ ಜನರು. ಸಂಘಟನೆ ಸಿಕ್ಕಿದ ಮೇಲೆ ಎಲ್ಲವೂ ತನ್ನಿಂದಲೇ ಭಾವನೆ ಸಹಜ. ವ್ಯಕ್ತಿ ಎಲ್ಲರ ಸಹಕಾರದಿಂದ ಬೆಳೆಯಬೇಕು. ಬೆಳೆದ ಮೇಲೆ ಇತರರಿಗೆ ಸಹಕಾರ ಮಾಡಬೇಕು. ಈ ದೃಷ್ಟಿಯಿಂದ ಕೆಲಸ ಮಾಡಿದಾಗ ಪಂಚಾಯಿತಿಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಉಪ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಯಾದ ವಿಷ್ಣು ಕುಮಾರ್ ಕೊಮ್ಮುಂಜೆ ಅವರನ್ನು ಗೌರವಿಸಲಾಯಿತು.
ಈ ಸಂದರ್ಭ ಡಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶೋಕ್ ಡಿ ಸೋಜ, ಪುತ್ತೂರು ವಿಧಾನ ಸಭಾ ಕ್ಷೇತ್ರ ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ವಕ್ತಾರ ರಮಾನಾಥ ವಿಟ್ಲ, ಪೆರುವಾಯಿ ಗ್ರಾಮ ಪಂಚಾಯಿತಿ ಸದಸ್ಯ ರಾಜೇಂದ್ರನಾಥ ರೈ, ಕೇಪು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಕರೀಮ್ ಕುದ್ದುಪದವು, ವಿಟ್ಲ ನಗರ ಅಧ್ಯಕ್ಷ ವಿ. ಕೆ. ಎಂ. ಅಶ್ರಫ್, ಮಾಣಿಲ ವಲಯ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ ಬಾಳ್ಳೆಕಲ್ಲು, ಮಾಜಿ ಸದಸ್ಯ ಕೃಷ್ಣಪ್ಪ ಕುಕ್ಕಾಜೆ, ಹಿರಿಯ ಕಾರ್ಯಕರ್ತ ಜಯರಾಮ ಬಲ್ಲಾಳ್, ಅಶ್ರಫ್ ಕಾಮಜಾಲು ಮತ್ತಿತರರು ಉಪಸ್ಥಿತರಿದ್ದರು.