ವಿಟ್ಲ: ಅಪರಿಚಿತ ಶವವೊಂದು ಪತ್ತೆಯಾದ ಘಟನೆ ಆ.07 ರಂದು ವಿಟ್ಲ ದಲ್ಲಿ ನಡೆದಿದೆ.
ವಿಟ್ಲ ಕಾಸರಗೋಡು ಮುಖ್ಯ ರಸ್ತೆಯ ನಾಲ್ಕು ಮಾರ್ಗ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿದೆ.

ರಸ್ತೆಯ ಫುಟ್ ಪಾತ್ ನ ಸ್ಲಾಬ್ ತೆರೆದ ಸ್ಥಿತಿಯಲ್ಲಿದ್ದು ಕುಡಿದ ಮತ್ತಿನಲ್ಲಿ ಅದಕ್ಕೆ ಬಿದ್ದಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಸ್ಥಳಕ್ಕೆ ಬಂದ ಕೆಲವರು ವ್ಯಕ್ತಿ ಚಂದಳಿಕೆ ನಿವಾಸಿ ಎಂದು ಹೇಳುತ್ತಿದ್ದು ಸರಿಯಾದ ಗುರುತು ಪತ್ತೆಯಾಗಿಲ್ಲ.
ಸದ್ಯ ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

























