ಬೆಂಗಳೂರು: ಬೇಡಿಕೆಗಳು ಇನ್ನೂ ಈಡೇರದ ಹಿನ್ನೆಲೆಯಲ್ಲಿ ಏ.7 ರಂದು ಎಲ್ಲ ಸಾರಿಗೆ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ, ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಚಳುವಳಿ ನಡೆಯಲಿದ್ದು, ಇಂದು ಕುಟುಂಬದವರೊಂದಿಗೆ ಸೇರಿಕೊಂಡು ಬೆಂಗಳೂರಿನ ಸರ್ಕಲ್ ಗಳಲ್ಲಿ ಬಜ್ಜಿ, ಬೋಂಡಾ ಮಾರಾಟ ಮಾಡಲಿದ್ದಾರೆ.
ಏ. 3ರಂದು ಸಾರಿಗೆ ನೌಕರರು ಬೆಂಗಳೂರು ನಗರಗಳ ಸರ್ಕಲ್ ಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಭಿತ್ತಿಪತ್ರ ಪ್ರದರ್ಶನ ಮಾಡಲಿದ್ದಾರೆ. ಏ. 4 ರಂದು ಸಾರ್ವಜನಿಕರಿಗೆ ಕರ ಹಂಚಿಕೆ ಮಾಡಲಿದ್ದಾರೆ. ಏ. 5 ರಂದು ಧರಣಿ ಸತ್ಯಾಗ್ರಹ, ಏಪ್ರಿಲ್ 6 ರಂದು ಸಾಮೂಹಿಕ ಉಪವಾಸ ಸತ್ಯಾಗ್ರಹ ನಡೆಸಲಿದ್ದು, ಏ. 7 ರಂದು ಎಲ್ಲ ಸಾರಿಗೆ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ, ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.