ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಿದ ಘಟನೆ ಪಣಂಬೂರಿನಿಂದ ಸುಮಾರು 90 ಮೀಟರ್ ದೂರ ಆಳ ಸಮುದ್ರದಲ್ಲಿ ನಡೆದಿದೆ.

ಹಡಗಿನಲ್ಲಿ 11 ಮಂದಿ ಮೀನುಗಾರರರಿದ್ದು, ಅವರೆಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಸಮೀಪದಲ್ಲಿದ್ದ ಇನ್ನೊಂದು ಹಡಗಿನಲ್ಲಿದ್ದವರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

























