ಮೂಡಬಿದಿರೆ: ಹೊಸ ಬೆಳಕು ಆರ್ಲಪದವು, ಪಾಣಾಜೆ ರಕ್ತಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಬಹುಮುಖ ಪ್ರತಿಭೆ ಅನನ್ಯ ಉಡುಪ ರವರನ್ನು ಮೂಡಬಿದಿರೆಯ ಮರವೂರು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ಸಮಾಜ ಸೇವಕಿ ಶೀತ ಭಟ್ ಪಾಣಾಜೆ ಕಲಾ ಪ್ರತಿಭೆಯನ್ನು ಸನ್ಮಾನಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಾಗೇಶ್ ಆರ್ ಉಡುಪ, ಸುಮನ ಉಡುಪ, ಕಿಶೋರ್ ಅರ್ಲಪದವು, ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಾಹಕ ನವೀನ್ ಪುತ್ತೂರು ರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಸ್ನೇಹ ಸಿಲ್ಕ್ ರೆಡಿಮೇಡ್ ಇದರ ಉದ್ಯೋಗಿ, ಕೃಷ್ಣ ಯುವಕ ಮಂಡಲ. ರಿ. ಸಿಟಿಗುಡ್ಡೆ ಇದರ ಅಧ್ಯಕ್ಷರಾದ ಬಿ.ರಾಜೀವ ಗೌಡ ರವರು ಸನ್ಮಾನ ಪತ್ರವನ್ನು ಓದಿದರು ಕಲಾವಿದ ಕೃಷ್ಣಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು.



























