ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಧ್ಯಕ್ಷರಾದ ಬಿ.ಕೆ. ಸೇಸಪ್ಪ ಬೆದ್ರಕಾಡು ರವರ ನೇತೃತ್ವದ ನಿಯೋಗವು ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮತ್ತು ಬೆಳ್ಳಾರೆಯ ಮಸೂದ್ ರವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಮತ್ತು ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಮತ್ತು ನೊಂದ ಕುಟುಂಬಕ್ಕೇ ಪರಿಹಾರ ನೀಡುವಂತೆ ಸರಕಾರವನ್ನು ಒತ್ತಾಯಿಸಲಾಗುವುದೆಂದು ಸಂಘದ ವತಿಯಿಂದ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಯು. ವಿಟ್ಲ, ಜಿಲ್ಲಾ ಉಪಾಧ್ಯಕ್ಷೆ ಯಾಮಿನಿ ಬೆಟ್ಟಂಪಾಡಿ, ಜಿಲ್ಲಾ ಗೌರವಾಧ್ಯಕ್ಷರಾದ ಸೋಮಪ್ಪ ನಾಯ್ಕ ಮಲ್ಲ, ಜಿಲ್ಲಾ ಗೌರವ ಸಲಹೆಗಾರರಾದ ಕುಶಾಲಪ್ಪ ಮೂಡಂಬೈಲ್, ಪುತ್ತೂರು ತಾಲೂಕು ಅಧ್ಯಕ್ಷರಾದ ಬಿ.ಕೆ. ಅಣ್ಣಪ್ಪ ಕಾರೆಕ್ಕಾಡು, ಮಹಿಳಾ ಅಧ್ಯಕ್ಷರಾದ ಲಲಿತ ನಾಯ್ಕ ಕಾರ್ಪಾಡಿ, ಕಡಬ ತಾಲೂಕು ಅಧ್ಯಕ್ಷರಾದ ಯಶವಂತ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಕೆದಿಲ ಇದರ ಅಧ್ಯಕ್ಷರಾದ ಮಾರಪ್ಪ ಸುವರ್ಣ, ಸಂಘಟನೆಯ ಸದಸ್ಯೆಯರಾದ ಅನುಸೂಯ, ನಾಗಮ್ಮ, ಬಿ.ಕೆ., ಪ್ರಸಾದ್ ಅನಂತಾಡಿ, ಗಣೇಶ್ ಶೀಗೆಬಲ್ಲೆ, ರಾಜೇಶ್ ಪೆರ್ನೆ ಉಪಸ್ಥಿತರಿದ್ದರು.

























