ವಿಟ್ಲ: ಕೂಟೇಲು ಶ್ರೀಕೃಷ್ಣ ಯುವಕ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಆತ್ಮನಿರ್ಭರ ಭಾರತ ಸರಣಿಯ ಮೂರನೇ ಶ್ರಮದಾನವು ಆ.7 ರಂದು ನಡೆಯಿತು.

ಮರಕ್ಕಿಣಿ ಪೇಟೆಯಲ್ಲಿ ಕಾರ್ಯಕರ್ತರೆಲ್ಲ ಒಟ್ಟು ಸೇರಿ ಶ್ರಮದಾನ ಪ್ರಾರಂಭಿಸಿದರು. ಯುವಕ ಸಂಘದ ಸದಸ್ಯರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಮರಕ್ಕಿಣಿ ಮುಖ್ಯರಸ್ತೆಯಿಂದ ಪ್ರಾರಂಭಿಸಿ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಸಾಗುವ ಸಾಯ ರಸ್ತೆಯಲ್ಲಿ ಮಣಿಯಡ್ಕ ಜಂಕ್ಷನ್ ವರೆಗೆ (ನೆಗಳಗುಳಿ-ಸಾಯ ಕೂಡುರಸ್ತೆ) ರಸ್ತೆಬದಿಯ ಪೊದೆಗಳನ್ನು ತೆರವುಗೊಳಿಸಲಾಯಿತು.

ಈ ವೇಳೆ ಮುಂದಿನ ಆದಿತ್ಯವಾರ(ಆ.14) ರಂದು ಕೂಟೇಲು ಅಂಗನವಾಡಿಯ ಪರಿಸರದಲ್ಲಿ ಅಷ್ಟಮೀ ಉತ್ಸವದ ತಯಾರಿ,ಚಪ್ಪರ,ಮೈದಾನದ ಅಲಂಕಾರ ಹಾಗೂ ರಸ್ತೆದುರಸ್ತಿಯ ಶ್ರಮದಾನ ಮಾಡುವುದೆಂದು ನಿರ್ಣಯಿಸಲಾಯಿತು.




























