ಬೆಂಗಳೂರು: ಜಿ. ಎಲ್. ಆಚಾರ್ಯ ಸಂಸ್ಥೆಯ ನಿರ್ದೇಶಕರಾದ ಜಿ. ಎಲ್. ಬಲರಾಮ್ ಆಚಾರ್ಯ ರವರು ‘ವಿಜಯರತ್ನ-2022’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವಿಜಯವಾಣಿ ದಿನ ಪತ್ರಿಕೆ ಮತ್ತು ದಿಗ್ವಿಜಯ ಚಾನೆಲ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವ ರಾಜ್ಯ ಮಟ್ಟದ ‘ವಿಜಯರತ್ನ-2022’ ಪ್ರಶಸ್ತಿಗೆ ಜಿ. ಎಲ್.ಆಚಾರ್ಯ ಸಂಸ್ಥೆಯ ನಿರ್ದೇಶಕರಾದ ಜಿ. ಎಲ್. ಬಲರಾಮ್ ಆಚಾರ್ಯ ರವರು ಪಾತ್ರರಾಗಿದ್ದಾರೆ.

ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದ ಸೇವೆಯನ್ನು ಗುರುತಿಸಿ ಬಲರಾಮ್ ಆಚಾರ್ಯ ರವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
























