ದ. ಕ ಜಿಲ್ಲಾ ಕಾಂಗ್ರೆಸ್ ನ ಪ್ರದಾನ ಕಾರ್ಯದರ್ಶಿ ಹಾಗೂ ಪ್ರಸ್ತುತ ಪುತ್ತೂರು ನಗರ ಕಾಂಗ್ರೆಸ್ ನ ಅಧ್ಯಕ್ಷರಾಗಿರುವ ಎಚ್ ಮಹಮ್ಮದ್ ಆಲಿ ಯವರನ್ನು ಕಡಬ ಬ್ಲಾಕ್ ಕಾಂಗ್ರೆಸ್ ನ ಉಸ್ತುವಾರಿಯಾಗಿ ನೇಮಕಗೊಳಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರವರು ಆದೇಶ ಮಾಡಿದ್ದಾರೆ.
ಈ ಹಿಂದೆ ಕಡಬ ಬ್ಲಾಕ್ ನ ಪಕ್ಷದ ಚುನಾವಣಾ ಉಸ್ತುವಾರಿಯಾಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿರುವ ಎಚ್ ಮಹಮ್ಮದ್ ಆಲಿ ಯವರು, ಸುಳ್ಯ ಬ್ಲಾಕ್ ಕಾಂಗ್ರೆಸ್ ಮತ್ತು ಬೆಳ್ತಂಗಡಿಯ ಎರಡು ಬ್ಲಾಕ್ ಗಳಲ್ಲಿ ಉಸ್ತುವಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಉತ್ತಮ ಸಂಘಟಕನೆಂದು ಹೆಸರು ಪಡೆದಿರುವ ಆಲಿಯವರನ್ನು ಇದೀಗ ಪಕ್ಷ ಸಂಘಟನೆಯ ಹಿತದ್ರಷ್ಟಿಯಿಂದ ಕಡಬ ಬ್ಲಾಕ್ ನ ಉಸ್ತುವಾರಿಯ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

























