ಬೆಳ್ಳಾರೆ: ಕೆಲ ದಿನಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ರವರು ಸಾಕಿದ್ದ ನಾಯಿ ‘ಬ್ಲ್ಯಾಕಿ’ ಅಸೌಖ್ಯದಿಂದಾಗಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ಸಾಕು ಪ್ರಾಣಿಗಳ ಬಗ್ಗೆ ಬಹಳ ಪ್ರೀತಿ ಹೊಂದಿದ್ದ ಪ್ರವೀಣ್ ರವರು ಪ್ರೀತಿಯಿಂದ ಸಾಕಿದ್ದ ‘ಬ್ಲ್ಯಾಕಿ’ ಕಳೆದ ಮೂರು ದಿನಗಳಿಂದ ಅಸೌಖ್ಯದಿಂದಿದ್ದು, ಆ.9 ರಂದು ಅಸುನೀಗಿದೆ.
‘ಬ್ಲ್ಯಾಕಿ’ ಲ್ಯಾಬ್ರಡಾರ್ ಜಾತಿಗೆ ಸೇರಿದೆ ನಾಯಿಯಾಗಿದ್ದು, ಮನೆಗೆ ತಂದು 8 ತಿಂಗಳಾಗಿತ್ತು.



























