ಬಂಟ್ವಾಳ: ಮಾಣಿ ಗ್ರಾಮದ ದೈವಗಳಿಗೆ ಸಂಬಂಧಪಟ್ಟ ಶ್ರೀ ಮಹಮ್ಮಾಯಿ ಅಮ್ಮನವರ ಪಾತ್ರಿಯಾಗಿ ಸುಮಾರು ಹದಿನೈದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಚೆನ್ನಪ್ಪ ನಾಯ್ಕ್ ಹಳೀರ ರವರು ಹೃದಯಾಘಾತದಿಂದಾಗಿ ನಿಧನರಾದರು.

ಚೆನ್ನಪ್ಪ ನಾಯ್ಕ ರವರು ದೈವ ಕಾರ್ಯದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ತೊಡಗಿಕೊಂಡು ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದರು.
ಮೃತರು ಪತ್ನಿ, ಮೂವರು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಅವರ ಸ್ವಗೃಹ ಮಾಣಿ ಹಳೀರದಲ್ಲಿ ನೆರವೇರಿತು.
ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಮಾಣಿಗುತ್ತು ಸಚಿನ್ ರೈ, ಗಡಿಪ್ರಧಾನರಾದ ಗುಡ್ಡ ಶೆಟ್ಟಿ ಯಾನೆ ರತ್ನಾಕರ ಭಂಡಾರಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಧಾರ್ಮಿಕ ಪ್ರಮುಖರಾದ ಜಗನ್ನಾಥ ಚೌಟ ಬದಿಗುಡ್ಡೆ, ಪಂಚಾಯತ್ ಸದಸ್ಯರಾದ ಸುದೀಪ್ ಕುಮಾರ್ ಶೆಟ್ಟಿ, ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಜನಾರ್ದನ ಪೂಜಾರಿ ನಾರುಕೋಡಿ, ಉದ್ಯಮಿ ನಾಗರಾಜ ಶೆಟ್ಟಿ ಸಾಗು, ರಘುರಾಮ ಶೆಟ್ಟಿ ಸಾಗು-ಹೊಸಮನೆ ಮೊದಲಾದವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.