ಪುತ್ತೂರು: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ ಆ.14 ರಂದು ನಡೆಯುವ ಪಾದಯಾತ್ರೆ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆಯು ಆ.10 ರಂದು ಮಧ್ಯಾಹ್ನ ಬಿಜೆಪಿ ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ , ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯೋತ್ತಡಿ,ನಿತೀಶ್ ಶಾಂತಿವನ, ಜಯಶ್ರೀ ಎಸ್ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯ ಬಪ್ಪಳಿಗೆ ಚಂದ್ರಶೇಖರ್ ರಾವ್, ರಾಜೇಶ್ ಬನ್ನೂರು,ಮಂಡಲ ಉಪಾಧ್ಯಕ್ಷರಾದ ವಿದ್ಯಾ ಆರ್ ಗೌರಿ, ಹರಿಪ್ರಸಾದ್ ಯಾದವ್ , ರಾಧಾಕೃಷ್ಣ ನಂದಿಲ,ಕಾರ್ಯದರ್ಶಿ ಸುನಿಲ್ ದಡ್ಡು,ಹರೀಶ್ ಬಿಜತ್ರೆ, ನಗರಸಭಾ ಸದಸ್ಯರಾದ ಶಿವರಾಮ ಸಪಲ್ಯ,ನವೀನ್ ನಾಯಕ್ ಪೆರಿಯತ್ತೋಡಿ,ಶೀನಪ್ಪ ನಾಯ್ಕ್, ಯುವ ಮೋರ್ಚಾ ಅಧ್ಯಕ್ಷ ನವೀನ್, ಹಿರಿಯರಾದ ಸುರೇಶ್ ಆಳ್ವ,ಕಚೇರಿ ಕಾರ್ಯದರ್ಶಿ ರತನ್ ಮೊದಲಾದವರು ಉಪಸ್ಥಿತರಿದ್ದರು.
ಆ.14 ರಂದು ಶಾಸಕ ಸಂಜೀವ ಮಠಂದೂರು ರವರ ನೇತೃತ್ವದಲ್ಲಿ ಪಾದಯಾತ್ರೆಯು ಬೆಳಗ್ಗೆ 9.00 ಗಂಟೆಗೆ ಬೊಳುವಾರು ಆಂಜನೇಯ ವೃತ್ತದಿಂದ ಆರಂಭವಾಗಿ ಬಸ್ ನಿಲ್ದಾಣದ ಬಳಿಯ ಗಾಂಧಿಕಟ್ಟೆಯಲ್ಲಿ ಮಹಾತ್ಮ ಗಾಂಧಿಯ ಪ್ರತಿಮೆಗೆ ಹಾರಾರ್ಪಣೆ ಮಾಡಿ ನಂತರ ಕೋರ್ಟ್ ರಸ್ತೆಯಾಗಿ ಕಿಲ್ಲೆ ಮೈದಾನ ಬಳಿಯ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ವೀರ ಯೋಧರಿಗೆ ಗೌರವ ಸಲ್ಲಿಸುವ ಮೂಲಕ ಸಂಪನ್ನಗೊಳ್ಳಲಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು ಹೆಚ್ವಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























