ಪುತ್ತೂರು: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಆಲಯ ಇಂದು(ಆ.10) ರಂದು ರಾತ್ರಿ ವೇಳೆ ‘ರಾಷ್ಟ್ರ ಧ್ವಜ’ದ ಬಣ್ಣದಲ್ಲಿ ಕಂಗೊಳಿಸುತ್ತಿದೆ.

‘ಆಜಾದಿ ಕಾ ಅಮೃತ ಮಹೋತ್ಸವ’ ಸಂಭ್ರಮವನ್ನು ದೇಶದೆಲ್ಲೆಡೆ ಆ.1ರಿಂದಲೇ ಸಂಭ್ರಮಿಸುತ್ತಿದ್ದು, ಅದೇ ರೀತಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೋಪುರದಲ್ಲಿ ಕೇಸರಿ, ಬಿಳಿ, ಹಸಿರು ವರ್ಣಗಳ ಬೆಳಕು ಕಂಗೊಳಿಸುತ್ತಿರುವುದು ‘ಆಜಾದಿ ಕಾ ಅಮೃತ ಮಹೋತ್ಸವ’ ಸಂಭ್ರಮವನ್ನು ಪುತ್ತೂರಿನಲ್ಲಿಯೂ ಸಂಭ್ರಮಿಸುತ್ತಿರುವ ಸೂಚಕವಾಗಿದೆ.
ರಾಷ್ಟ್ರಧ್ವಜದ ಬಣ್ಣದ ಮೂಲಕ ಕಂಗೊಳಿಸುತ್ತಿರುವ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯವು ವೈರಲ್ ಆಗುತ್ತಿದೆ. ‘ರಾಷ್ಟ್ರ ಧ್ವಜ’ದ ಬಣ್ಣದಲ್ಲಿ ಕಂಗೊಳಿಸುತ್ತಿರುವ ‘ಹತ್ತೂರ ಒಡೆಯನ’ ದೇವಾಲಯದ ಚಿತ್ರವನ್ನು ತಮ್ಮ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

























