ವಿಟ್ಲ: ಕುಡ್ತಮುಗೇರು ಅಂಗನವಾಡಿ ಕೇಂದ್ರಕ್ಕೆ ಕರ್ಣಾಟಕ ಬ್ಯಾಂಕ್ ನಿಂದ ಕಟ್ಟಡ ಕೊಡುಗೆಯಾಗಿ ನೀಡಲಾಗಿದ್ದು, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೆಬಿಸಾ ಖಾದರ್ ರವರು ರಿಬ್ಬನ್ ಕತ್ತರಿಸುವ ಮೂಲಕ ಕಟ್ಟಡವನ್ನು ಉದ್ಘಾಟಿಸಿದರು.

ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕರ್ಣಾಟಕ ಬ್ಯಾಂಕ್ ಕುಡ್ತಮುಗೇರು ಶಾಖಾ ವ್ಯವಸ್ಥಾಪಕರಾದ ಸುಬ್ರಹ್ಮಣ್ಯ ರವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮಂಕುಡೆ ಸರಕಾರಿ ಶಾಲಾ ಮುಖ್ಯೋಪಾಧ್ಯಾಯರಾದ ಶೋಭಾ ಈಶ್ವರ ಭಟ್ ಭಾಗವಹಿಸಿದ್ದರು. ಅಂಗನವಾಡಿ ಪೋಷಕ ಸಂಘದ ಅಧ್ಯಕ್ಷೆ ಹೇಮಲತಾ, ಮಾಜಿ ಸದಸ್ಯೆ ವೇದಾವತಿ, ಅಂಗನವಾಡಿ ಮೇಲ್ವಿಚಾರಕಿ ಲೋಲಾಕ್ಷಿ, ಪಂ.ಸದಸ್ಯರಾದ ಹರೀಶ್ ಮಂಕುಡೆ, ಕೃಷ್ಣಪ್ಪ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ರಮ್ಲಾ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮಿ ಧನ್ಯವಾದ ಸಮರ್ಪಿಸಿದರು.



























