2023ರಲ್ಲಿ ಜಾಗತಿಕ ಮಟ್ಟದಲ್ಲಿ ಜಾನ್ಸನ್ ಆಂಡ್ ಜಾನ್ಸನ್ ಕಂಪನಿ ಟಾಲ್ಕ್ ಆಧಾರಿತ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಸಲಿದೆ ಎಂದು ಪ್ರಸ್ತುತ ಕಂಪನಿ ಹೇಳಿದೆ.
ಸಾವಿರಾರು ಗ್ರಾಹಕರು ಸುರಕ್ಷತೆ ಬಗ್ಗೆ ಮೊಕದ್ದಮೆ ದಾಖಲಿಸಿದ್ದರಿಂದ ಎರಡು ವರ್ಷಗಳ ಹಿಂದೆ ಅಮೆರಿಕದಲ್ಲಿ ಈ ಕಂಪನಿ ಬೇಬಿ ಪೌಡರ್ ಮಾರಾಟ ನಿಲ್ಲಿಸಿತ್ತು. ವಿಶ್ವದಾದ್ಯಂತ ಬಂಡವಾಳದ ಮೌಲ್ಯ ಮಾಪನ ಮಾಡಿದ ನಂತರ ಕಾರ್ನ್ ಸ್ಟಾರ್ಚ್ ಆಧಾರಿತ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಲು ನಿರ್ಧರಿಸಿದ್ದೇವೆ. ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಈಗಾಗಲೇ ಕಾರ್ನ್ ಸ್ಟಾರ್ಚ್ ಆಧಾರಿತ ಬೇಬಿ ಪೌಡರ್ ಮಾರಾಟವಾಗಿದೆ ಎಂದು ಕಂಪನಿ ಹೇಳಿದೆ.
2020ರಲ್ಲಿ ಜಾನ್ಸನ್ ಆಂಡ್ ಜಾನ್ಸನ್ ಕಂಪನಿ ಟಾಲ್ಕ್ ಆಧಾರಿತ ಬೇಬಿ ಪೌಡರ್ನ್ನು ಅಮೆರಿಕ ಮತ್ತು ಕೆನಡಾದಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸಿತ್ತು. ಈ ಉತ್ಪನ್ನ ಸುರಕ್ಷಿತವಲ್ಲ ಎಂದು ತಪ್ಪು ಮಾಹಿತಿ ಹರಿದಾಡಿತ್ತು ಎಂದು ಕಂಪನಿ ಹೇಳಿದೆ. ಆದಾಗ್ಯೂ, ಉತ್ಪನ್ನದ ವಿರುದ್ದ ದೂರು ನೀಡಿ ಗ್ರಾಹಕರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಮಾರಾಟವೂ ಕುಸಿದಿತ್ತು. ಟಾಲ್ಕ್ ಪೌಡರ್ ಅಸ್ಬೆಸ್ಟೋಸ್ ಜತೆ ಕಲುಷಿತಗೊಂಡು ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂದು ಗ್ರಾಹಕರು ಕಂಪನಿ ವಿರುದ್ದ ದೂರಿದ್ದು, ಈ ಬಗ್ಗೆ ಸುಮಾರು 38,000 ಮೊಕದ್ದಮೆ ದಾಖಲಾಗಿದೆ.
ಈ ಆರೋಪವನ್ನು ಜೆ ಆಂಡ್ ಜೆ ನಿರಾಕರಿಸಿದ್ದು, ದಶಕಗಳ ಕಾಲ ನಡೆಸಿದ ವೈಜ್ಞಾನಿಕ ಪರೀಕ್ಷೆ ಮತ್ತು ನಿಯಂತ್ರಕಗಳ ಅನುಮೋದನೆಯು ಆ ಟಾಲ್ಕ್ ಸುರಕ್ಷಿತ ಮತ್ತು ಅಸ್ಬೆಸ್ಟೋಸ್ ಮುಕ್ತ ಎಂದು ತೋರಿಸಿದೆ. ಗುರುವಾರ ತಮ್ಮ ಉತ್ಪನ್ನವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದಾ ಕಂಪನಿ ಈ ಮಾತನ್ನು ಪುನರುಚ್ಚರಿಸಿದೆ.



























