ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ವಾಮದಪದವು ವಲಯ,
ಪಿಲಿಮೊಗರು, ಪಿಲಾತಬೆಟ್ಟು, ಕೊಡಂಬೆಟ್ಟು, ಮೂಡುಪಡುಕೋಡಿ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಭಾರತ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಶ್ರೀಗಣೇಶ ಮಂದಿರ ವಾಮದಪದವಿನಲ್ಲಿ ಆ.13 ರಂದು ಸಂಜೆ 5.30ಕ್ಕೆ ಪಂಜಿನ ಮೆರವಣಿಗೆ ನಡೆಯಲಿದೆ.
ಶ್ರೀಗಣೇಶ ಮಂದಿರ ವಾಮದಪದವಿನಿಂದ ಹೊರಟು ಬಸ್ತಿಕೋಡಿ, ವಾಮದಪದವು ವೃತ್ತವಾಗಿ ಪಾಲೆದಮರಕ್ಕೆ ಸಾಗಿ ಮರಳಿ ಗಣೇಶ ಮಂದಿರದ ವರೆಗೆ ಮೆರವಣಿಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ಧರ್ಮ ಜಾಗರಣದ ಪ್ರಾಂತ ಪ್ರಮುಖರಾದ ದಿನಕರ್ ಅದೇಲು ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




























