ಮಂಗಳೂರು: ವಿದ್ಯಾರ್ಥಿಗಳ ಕೈಯಲ್ಲಿದ್ದ ರಾಖಿ ತೆಗೆಸಿ ಶಾಲೆಯ ಪ್ರಾಧ್ಯಾಪಕರೊಬ್ಬರು ಪೋಷಕರ ಕೆಂಗಣ್ಣಿಗೆ ಗುರಿಯಾದ ಘಟನೆ ಕಾಟಿಪಳ್ಳದ ಇನ್ ಫ್ಯಾಂಟ್ ಮೇರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದಿದೆ.

ಆ.11 ಮತ್ತು 12 ರಂದು ದೇಶದಲ್ಲಿ ‘ರಕ್ಷಾ ಬಂಧನ’ ಆಚರಿಸಲಾಗಿದ್ದು, ಆ.11 ರಂದು ಈ ಶಾಲೆಯ ಕೆಲವು ವಿದ್ಯಾರ್ಥಿಗಳ ರಾಖಿಯನ್ನ ಕಟ್ಟಿಕೊಂಡು ಬಂದಿದ್ದರಂತೆ.
ಇದನ್ನು ಗಮನಿಸಿದ ಶಾಲಾ ಪ್ರಾಧ್ಯಾಪಕರೊಬ್ಬರು ರಾಖಿಯನ್ನ ಬಿಚ್ಚಿಸಿದ್ದರಂತೆ. ಇದು ಪೋಷಕರಿಗೆ ತಿಳಿದು, ಪ್ರಾಧ್ಯಾಪಕರ ನಡೆಗೆ ಮುನಿಸಿಕೊಂಡ ಪೋಷಕರು ನಿನ್ನೆ ಶಾಲೆಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲದೇ ಶಿಕ್ಷಕರಿಗೆ ತರಾಟೆ ಕೂಡ ತೆಗೆದುಕೊಂಡಿದ್ದಾರೆ.

ನಿಯಮದ ಪ್ರಕಾರ ರಕ್ಷಾ ಬಂಧನ ಧರಿಸುವಂತಿಲ್ಲ ಅನ್ನೋದು ಶಾಲೆಯ ವಾದ ಎಂದು ಅಧ್ಯಾಪಕರು ಸಮಾಜಾಯಿಸಿ ನೀಡಿದರು. ಕೊನೆಗೆ ಪ್ರಾಧ್ಯಾಪಕರು ಕ್ಷಮೆ ಕೋರಿದರು. ಬಳಿಕ ಪೋಷಕರು ಶಾಲೆಯ ಫಾದರ್‌ಗೆ ರಾಖಿ ಕಟ್ಟಿ ರಕ್ಷಾ ಬಂಧನದ ಶುಭಾಶಯ ಕೋರಿದರು. ಶಾಲಾ ಫಾದರ್ ಹಾಗೂ ಪೊಲೀಸರ ಮಧ್ಯ ಪ್ರವೇಶದೊಂದಿಗೆ ಪ್ರಕರಣ ಸುಖಾಂತ್ಯವಾಗಿದೆ.

 
	    	



























